ಡಿ.18 ರಂದು ಬುಧವಾರ ನಾಯಕನಹಟ್ಟಿ ಹೋಬಳಿ ವಿದ್ಯುತ್ ಪೂರೈಕೆ ಸ್ಥಗಿತ.
ನಾಯಕನಹಟ್ಟಿ:: ಡಿ.18 ರಂದು ಬುದುವಾರ ತಳಕು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬುಧವಾರ ಕೆಪಿಟಿಸಿಎಲ್ ವತಿಯಿಂದ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನಾಯಕನಹಟ್ಟಿ ಹಾಗೂ ನೇರಲಗುಂಟೆ. 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4:00ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ಗ್ರಾಹಕರು/ ರೈತರು ಸಹಕರಿಸಬೇಕು.ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎನ್ ಜಿ ಮಮತಾ. ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ನಾಯಕನಹಟ್ಟಿ ಹೋಬಳಿಯ ಗ್ರಾಮಗಳು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ, ನಲಗೇತನಹಟ್ಟಿ, ಗೌಡಗೆರೆ, ಮಲ್ಲೂರಹಳ್ಳಿ, ನೇರಲಗುಂಟೆ, ಎನ್ ದೇವರಹಳ್ಳಿ,ಎನ್ ಮಹದೇವಪುರ, ತಿಮ್ಮಪ್ಪಯ್ಯನಹಳ್ಳಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳು