ಚಳ್ಳಕೆರೆ :
ಮೊಳಕಾಲ್ಕೂರು: ಅನಾವರಣಗೊಂಡ ಬುಡಕಟ್ಟು
ಆಚರಣೆ
ಮೊಳಕಾಲ್ಮುರಿನ ಕನಕನಹಟ್ಟಿ ಯಾದವ ಸಮುದಾಯದ
ಬುಡಕಟ್ಟು ಆಚರಣೆಗಳನ್ನು ಅನಾವರಣ ಮಾಡುವ, ಈರಣ್ಣ
ದೇವರ ಕಾರ್ತಿಕೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಈರಣ್ಣ
ದೇವರನ್ನು ಅರಣ್ಯ ಪ್ರದೇಶದಲ್ಲಿ ಕರೆ ತಂದು ಪೂಜೆ ಸಲ್ಲಿಸಿದರು.
ದೇವರ ಮೂರ್ತಿಯನ್ನು ಅಟ್ಟಿಗೆ ಕಳಸು ಹೊತ್ತ ಮಕ್ಕಳ ಜೊತೆ
ಮೆರವಣಿಗೆ ಮೂಲಕ ವಾಪಸ್ಸು ಕರೆತಂದು ಹಟ್ಟಿಯವರ ಭಾಗದ
ಸರಕಾರಿ ಶಾಲೆಯ ಸಂಪುಟದಲ್ಲಿರುವ ದೇವರಕಟ್ಟೆ ಮೇಲೆ
ತಾತ್ಕಾಲಿಕವಾಗಿ ನಿರ್ಮಿಸಿದ್ದ ಹಾವಿನ ಗೂಡಿನೊಳಗೆ ಪ್ರತಿಷ್ಠಾಪಿಸಿ
ಪೂಜೆ ಸಲ್ಲಿಸಲಾಯಿತು.