ಚಳ್ಳಕೆರೆ :
ಚಳ್ಳಕೆರೆ: ಕುಣಿಯುತ್ತಲೆ ಕುಸಿದು ಬಿದ್ದು ಪ್ರಾಣ ಬಿಟ್ಟ
ಯುವಕ
ಸ್ನೇಹಿತನ ಮದುವೆ ಮೆರವಣಿಗೆ ಡಿಜೆ ಸದ್ದಿಗೆ ಕುಣಿಯುತ್ತಿದ್ದ
ಯುವಕನೋರ್ವ ಕುಸಿದು ಬಿದ್ದು ಚಿಕಿತ್ಸೆ ಫಲಿಸದೆ
ಸಾವನ್ನಪ್ಪಿದ್ದಾನೆ.
ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದ ಯುವ ಆದರ್ಶ
ಭಾನುವಾರ ತಡರಾತ್ರಿ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ
ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವಾಗ ಕುಸಿದು ಬಿದ್ದಿದ್ದಾನೆ.
ತಕ್ಷಣ
ಪರಶುರಾಂಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ
ಫಲಿಸದೆ ಮೃತಪಟ್ಟಿದ್ದಾನೆ. ಪರುಶುರಾಂಪುರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.