ಚಳ್ಳಕೆರೆ : ಯುವಕರು ಸಮಾಜದ ಆಶಾಕಿರಣ ಸಮಾಜದಲ್ಲಿನ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವವಾಗಿದೆ ಸಮಾಜಸೇವೆಗೆ ಅಧಿಕಾರ ಒಂದೇ ಮುಖ್ಯವಲ್ಲ ಸಮಾಜದಲ್ಲಿರುವ ಅಂತಹ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಈ ಭೂಮಿಯ ಮತ್ತೆ ಇದಕ್ಕೆ ಪೂರಕವಾದಂಥ ಋಣವನ್ನು ತೀರಿಸುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ಇಂದು ನಗರಂಗೆರೆ ಗ್ರಾಮದಲ್ಲಿ ಶ್ರೀಮಾನ್ ಸಮಗ್ರ ಗ್ರಾಮೀಣಾಭಿವೃದ್ಧಿ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿನ ಯುವಕರು ಪ್ರತಿಯೊಂದು ಹಾಗು ಹೋಗುಗಳನ್ನು ಗಮನಿಸಬೇಕು ಪ್ರತಿಯೊಂದನ್ನು ಪ್ರಶ್ನೆ ಮಾಡಬೇಕು ಪ್ರಕೃತಿ ವಿಕೋಪ ಮುಂತಾದ ಸಂದರ್ಭದಲ್ಲಿ ಅನೇಕ ಯುವಕರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತಮ್ಮ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ ಅದೆಷ್ಟು ಮೃತದೇಹಗಳನ್ನು ಸಾಗಿಸಲು ನೆರವಾಗಿದ್ದಾರೆ

ಚಳ್ಳಕೆರೆ ತಾಲ್ಲೂಕು ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಬಡವರಿರುವ ಮುಗ್ಧರು ಇರುವಂತಹ ತಾಲ್ಲೂಕು ಎಲ್ಲಾ ಜನಗಳ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗೆ ಯುವಕರು ಪೂರಕವಾಗಿ ಕೆಲಸ ನಿರ್ವಹಿಸುವುದು ಅಗತ್ಯವಾಗಿದೆ.

ಮುಖ್ಯವಾಗಿ ಜಿಲ್ಲೆಯಲ್ಲಿ ಬೀಳುವ ಮಳೆ ಪ್ರಮಾಣ ಕಡಿಮೆಯಾಗಿದ್ದು ಇಲ್ಲಿ ಬೀಳುವಂತಹ ಮಳೆನೀರನ್ನು ಹಿಡಿದಿಡುವ ಕೆಲಸವಾಗಬೇಕಿದೆ ಹಾಗೇನೆ ಹೆಚ್ಚೆಚ್ಚು ವೃಕ್ಷಗಳನ್ನು ಸರ್ಕಾರಿ ಸ್ವಾಮ್ಯದ ನೆಲದಲ್ಲಿ ನೀಡಬೇಕಾಗಿದೆ ಈ ಕೆಲಸದಲ್ಲಿ ಇಲ್ಲಿನ ಯುವಕರೊಂದಿಗೆ ತಾಲೂಕಾಡಳಿತ ಸದಾ ಜೊತೆಗಿದ್ದು ಸಹಕರಿಸುವ ಲಾಗುವುದು ಆಗಿದೆ ಅದೆಷ್ಟೋ ದುರ್ಬಲ ವರ್ಗದವರಿಗೂ ಅನ್ನ ಮತ್ತು ಬಟ್ಟೆ ಉಳ್ಳವರಿಂದ ಪಡೆದು ನೀಡುವ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ ಎಲ್ಲ ಯುವಕರು ಮುಂದಾಗಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ನರಹರಿ ಆಶ್ರಮದ ರಾಜರಾಮ್ ಸ್ವಾಮಿ, ಉದ್ಯಮಿ ಸಂಜೀವಮೂರ್ತಿ, ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾಕ್ಟರ್ ಪಾಲಾಕ್ಷಪ್ಪ, ನ್ಯಾಯಾಂಗ ಇಲಾಖೆಯ ತಿಪ್ಪೇರುದ್ರಪ್ಪ , ನಗರಂಗೆರೆ ಗ್ರಾಮ ಪಂಚಾಯತಿ ಸದಸ್ಯ ಸತೀಶ್ ಹಾಗೂ ಇತರರು ಉಪಸ್ಥಿತರಿದ್ದರು

Namma Challakere Local News
error: Content is protected !!