ಗಜ್ಜುಗಾನಹಳ್ಳಿ ರೈತನಿಗೆ ಕಳಪೆ ತೊಗರಿ ಬೀಜ ನೀಡಿ ವಂಚನೆ ಆತಂಕದಲ್ಲಿ ರೈತ ಡಿ.ಟಿ. ತಿಪ್ಪೇಸ್ವಾಮಿ.

ನಾಯಕನಹಟ್ಟಿ::ಡಿ.15. ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ರೈತ ಡಿ .ಟಿ. ತಿಪ್ಪೇಸ್ವಾಮಿ ದಾವಣಗೆರೆ ಮೇ!! ಆಗ್ರೋ ಸೀಡ್ಸ್ ಕಾರ್ಪೊರೇಷನ್ ರವರಿಂದ ತಮ್ಮ12 ಎಕರೆ ಜಮೀನಿಗೆ ಕ್ರಾಂತಿ ಸೀಡ್ಸ್ ತೊಗರಿ ಬೀಜವನ್ನು ತಂದು ಬಿತ್ತನೆಯನ್ನು ಮಾಡಿದರು ಬಿತ್ತನೆ ಮಾಡಿದ ಕ್ಷಣದಿಂದ ಇಲ್ಲಿಯವರೆಗೆ ಬರೇ ಗಿಡ ಮಾತ್ರ ಕಾಣಿಸುತ್ತದೆ ಗಿಡದಲ್ಲಿ ಯಾವುದೇ ಹೂವು ಕಾಯಿ ಬಿಟ್ಟಿಲ್ಲ ಎಂದು ರೈತ ಡಿ.ಟಿ. ತಿಪ್ಪೇಸ್ವಾಮಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕೃಷಿ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ನ್ಯಾಯ ದೊರಕಿಸಬೇಕು ಎಂದು ರೈತ ಡಿ. ಟಿ. ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.

ಇನ್ನೂ ಗ್ರಾಮದ ಯುವ ಮುಖಂಡ ಜಿ ಬಿ ತಿಪ್ಪೇಸ್ವಾಮಿ ಮಾತನಾಡಿದರು ನಮ್ಮ ಗಜ್ಜುಗಾನಹಳ್ಳಿ ಗ್ರಾಮದ ರೈತರು ದಾವಣಗೆರೆ ಮೇ!! ಆಗ್ರೋ ಸ್ವೀಟ್ ಕಾರ್ಪೊರೇಷನ್ ರವರಿಂದ ಕ್ರಾಂತಿ ಸೀಡ್ಸ್ ತೊಗರಿ ಬೀಜವನ್ನ ತಂದು ಬಿತ್ತನೆ ಮಾಡಿದ್ದಾರೆ ತೊಗರಿ ಗಿಡ ಹೂವು ಕಾಯಿ ಬಿಟ್ಟಿಲ್ಲ ಕಂಪನಿಯವರನ್ನು ಕೇಳಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ ಶೀತ ವಾತಾವರಣಕ್ಕೆ ಹಾಗಾಗಿದೆ ಎಂದು ಹೇಳುತ್ತಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಂದು ಜಮೀನಿಗೆ ಭೇಟಿ ನೀಡಿ ಬೆಳೆಯನ್ನ ವೀಕ್ಷಣೆ ಮಾಡಿ ಅಂಗಡಿ ಮಾಲೀಕನ ಲೆಸೆನ್ಸ್ ರದ್ದು ಮಾಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ವಿಜಯಕುಮಾರ್, ಡಿ.ಎಸ್. ಮನೋಹರ್, ರೈತ ತಿಪ್ಪೇಸ್ವಾಮಿ ಯುವ ಮುಖಂಡ ಜಿ .ಬಿ.ತಿಪ್ಪೇಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!