ಹರಾಜ್ ಗೊಂಡ ಬ್ಯಾಂಕ್ ಕಟ್ಟಡ ವಶಕ್ಕೆ ಪಡೆಯಲು ಅಲೆದಾಟ.
27.50 ಲಕ್ಷಕ್ಕೆ ಖರೀದಿ ಮಾಡಿದ ಕಚೇರಿ ಕಟ್ಟಡ ಜಾಗ ಒಬ್ಬರ ಹೆಸರಿಗೆ , ಕಟ್ಟಡ ಮತ್ತೊಬ್ಬ ಹೆಸರಿಗೆ.
ಯಾಮರಸಿ ಹರಾಜ್ ಪ್ರಕ್ರಿಯೆ ಮಾಡಿದ ಬ್ಯಾಂಕಿನ ಅಧಿಕಾರಿಗಳು..
ಚಳ್ಳಕೆರೆ :ತಾಲೂಕಿನ ತಳಕು ಗ್ರಾಮದಲ್ಲಿ ಬ್ಯಾಂಕೊಂದು ಹರಾಜು ನಡೆಸಲಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ, ೨೯.೫೦ (29.50) ಲಕ್ಷ ಹಣಕ್ಕೆ ಖರೀದಿ ಮಾಡಿಕೊಂಡಿರುವ ಮನೆಯ ದಾಖಲಾತಿಗಳು ಕಾನೂನು ಬಾಹೀರವಾಗಿವೆ ಎಂದು ತಳಕು ಗ್ರಾಮದ ಕರೀಮ್ ಎಂಬಾತ ಅಳಲು ತೋಡಿಕೊಂಡಿದ್ದಾನೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆ ಸಹಿತಿ ಇಂದು ಮಾದ್ಯಮದ ಜತೆ ಮಾತನಾಡಿ, ಬ್ಯಾಂಕಿನ ಟೆಂಡರ್ ನಿಯಮದಂತೆ ೨.೫ (2.5)ಲಕ್ಷ ಇಎಂಡಿ ಹಣ ಕಟ್ಟಿ ಭಾಗವಹಿಸಲಾಗಿತ್ತು. ೨೯.೫೦ (27.50) ಲಕ್ಷಕ್ಕೆ ಟೆಂಡರ್ನಲ್ಲಿ ಕೂಗಲಾಗಿತ್ತು. ಮತ್ತೆ ಬ್ಯಾಂಕಿನ ನಿಯಮದಂತೆ ಪೂರ ಹಣ ಸಮಯಕ್ಕೆ ಸರಿಯಾಗಿ ಜಮಾ ಮಾಡಲಾಗಿದೆ. ಈಗ ಬ್ಯಾಂಕಿನವರು ನೀಡಿರುವ ದಾಖಲೆ ಹಿಡಿದು ನೋಂದಾಣಿ ಮಾಡಿಸಿಕೊಳ್ಳಲು ಕಚೇರಿಗೆ ಹೋದಾಗ, ಇದೊಂದು ಸರ್ಕಾರಿ ಗೋಮಾಳ ಭೂಮಿಯಾಗಿದೆ. ಭೂಮಿ ಒಬ್ಬರ ಹೆಸರಿಗೆ ಮತ್ತು ಭೂಮಿಯಲ್ಲಿರುವ ಕಟ್ಟಡ ಮತ್ತೊಬ್ಬರ ಹೆಸರಿಗೆ ಇರುವ ಕಾರಣ, ಖಾತೆ ನೊಂದಾಣಿ ಮಾಡಲು ನಿರಾಕರಿಸಲಾಗಿದೆ. ಒಂದು ವರ್ಷ ಬ್ಯಾಂಕಿಗೆ ಅಲೆದಾಡಿದರೂ ಕಟ್ಟಿರುವ ಹಣವನ್ನಾದರೂ ಹಿಂತಿರುಗಿಸಿ ಕೊಡುತ್ತಿಲ್ಲ. ಕೂಡಲೇ ಹಣ ಹಿಂತಿರುಗಿಸಬೇಕು ಇಲ್ಲವೇ ಟೆಂಡರ್ನಲ್ಲಿ ನೀಡಲಾಗಿರುವ ಆಸ್ತಿಯ ದಾಖಲೆಯನ್ನು ಸರಿಪಡಿಸಿಕೊಡಬೇಕು. ಇಲ್ಲದಿದ್ದಲ್ಲಿ ಕುಟುಂಬಸ್ಥರು ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.