ಚಿತ್ರದುರ್ಗ :
ಸುಟ್ಟು ಕರಕಲಾದ ಮೆಕ್ಕೆಜೋಳ
ಕಿಡಿಗೇಡಿಗಳ ಕೃತ್ಯಕ್ಕೆ ಕಟಾವು ಮಾಡಿ ಗುಡ್ಡೆ ಹಾಕಿದ್ದ
ಸುಮಾರು 45 ಲೋಡ್ ಮೆಕ್ಕೆಜೋಳ ಸುಟ್ಟು ಕರಕಲಾದ ಘಟನೆ ಚಿತ್ರದುರ್ಗ ತಾಲೂಕಿನ ಹುಲ್ಲೇಹಾಳ್ ಗ್ರಾಮದಲ್ಲಿ ನಡೆದಿದೆ.
ಗುಡ್ಡೆ ಹಾಕಿದ್ದ ಮೆಕ್ಕೆಜೋಳಕ್ಕೆ ಬೆಂಕಿ ಬಿದ್ದ ಪರಿಣಾಮ 45 ಲೋಡ್ ನಷ್ಟು, ಮೆಕ್ಕೆಜೋಳ ಸುಟ್ಟು ಕರಕಲಾಗಿವೆ. ವಿಪರೀತ ಮಳೆಗೆ ಮೊದಲೇ ಇಳುವರಿ ಕೂಡ ಕಡಿಮೆಯಾಗಿದೆ. ಈಗ ಅಷ್ಟೋ ಇಷ್ಟೋ ಬಂದಿದ್ದ ಬೆಳೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸುತ್ತಮುತ್ತ ಹೊಗೆ ಆವರಿಸಿದ್ದು ಗ್ರಾಮಸ್ತರು ಗಮನಿಸಿ ಬಂದು ನೋಡಿದ್ದು ಕಣದಲ್ಲಿ ಕಟಾವು ಮಾಡಿದ್ದ ಸುಮಾರು 10 ರೈತರ 45 ಲೋಡ್ ಮೆಕ್ಕೆಜೋಳಕ್ಕೆ ಬಿದ್ದಿದ್ದ ಬೆಂಕಿ ಬಿದ್ದಿದ್ದು ಗ್ರಾಮಸ್ತರು ನೀರನ್ನ ಹಾಕಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಕರಕಾಲಾಗಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.