ಚಳ್ಳಕೆರೆ : ಯಾವುದೇ ಜಾತಿಮತ, ಪಂಥಕ್ಕೆ ಸೇರದೆ ದೆಶಕ್ಕೆ ಪ್ರಾಣ ತ್ಯಾಗ ಮಾಡಿದ ದಿಮಂತ ವ್ಯಕ್ತಿ ಟಿಪ್ಪು, ಕೆಲವು ಮಹಾನ್ ದಾರ್ಶನಿಕರ ಸಾಲಿನಲ್ಲಿ ನಿಲ್ಲುವ ಟಿಪ್ಪು ಅಪ್ಪಟ ದೇಶ ಭಕ್ತ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಮತ್ತು ಮುಸ್ಲಿಂ ಸಮುದಾಯದ ವತಿಯಿಂದ ಚಳ್ಳಕೆರೆ ನಗರದ ಜಾಮಿಯಾ ಶಾದಿ ಮಹಲ್ ನಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆರೆ, ಕಟ್ಟೆ, ಬಾವಿಗಳನ್ನು ಅಂದಿನ ರಾಜರ ಕಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಟಿಪ್ಪುಸುಲ್ತಾನ್ ಜಾರಿಗೆ ತಂದು ರೈತರ ಮೇಲೆ ಹೆಚ್ಚಿನ ತೆರೆಗೆ ವಿದಿಸುತ್ತಿದ್ದ ಬ್ರಿಟೀಷ್ ಸರಕಾರದ ವಿರುದ್ದ ಹೋರಾಟ ಮಾಡಿ ಅತಿ ಚಿಕ್ಕ ವಯಸ್ಸಿನಲ್ಲೇ ಸೇನೆ ಸೇರಿ ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಪತ್ರಕರ್ತ ಸಾಹಿತಿ ಮೈತ್ರಿ ದ್ಯಾಮಯ್ಯ ಉಪನ್ಯಾಸ ನೀಡುತ್ತಾ ತಂದೆ ಹೈದಾರಾಲಿ ಯುದ್ದಕ್ಕೆ ಹೋಗುವಾಗ 13 ವರ್ಷದ ಟಿಪ್ಪ್ ತಂದೆಯೊAದಿಗೆ ಯುದ್ದದಲ್ಲಿ ಭಾಗವಹಿಸಿ ಹೋರಾಟ ನಡೆಸುತ್ತಾನೆ ಅತಿ ಚಿಕ್ಕ ವಯಸ್ಸಿನಲ್ಲಿ ರಾಕೇಟ್ ಕಂಡು ಹಿಡಿದು ಯುದ್ದದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯುದ್ದಕ್ಕೆ ರಾಕೇಟ್ ಬಳಗೆ ಮಾಡಿಕೊಂಡಿರುವುದು ಪ್ರಥಮ ಇವರು ಅನೇಕ ದೇವಸ್ಥಾನ, ಗುಡಿಗೋಪರಗಳ ನಿರ್ಮಾಣ ಹಾಗೂ ರಕ್ಷಣೆ ಮಾಡಿದ್ದಾರೆ. ಬ್ರೀಷರನ್ನು ಹೋಡಿಸಲು ಅನೇಕ ರಾಜರ ಸಹಾಯ ಕೇಳಿದರೂ ಯಾರು ಬೆಂಬಲ ನೀಡಲಿಲ್ಲ ಅವರು ನಮ್ಮ ದೇಶದ ಸಂಪತನ್ನು ಕೊಳ್ಳೆ ಹೊದರು ಒಂದು ವೇಳೆ ಅಂದು ಬ್ರಿಟೀಷರನ್ನು ನಮ್ಮ ದೇಶಕ್ಕೆ ಬಿಟ್ಟುಕೊಳ್ಳದಿದ್ದರೆ ಸ್ವಾತಂತ್ರö್ಯ ಚಳುವಳಿ ನಡೆಯುತ್ತಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷರಾದ ಪಿ.ಬಷೀರ್ ಹಯಾತ್, ನಗರಸಭೆ ಅಧ್ಯಕ್ಷರಾದ ಜೈತುನ್ ಬೀ, ಉಪಾಧ್ಯಕ್ಷರಾದ ಸುಜಾತ ಪ್ರಹ್ಲಾದ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ಹೆಚ್.ಎಸ್.ಸೈಯದ್, ಮುಜೀಬ್, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಅನ್ವರ್ ಮಾಸ್ಟರ್, ದಾದಾಪೀರ್, ಅಲ್ಲಾಬಕಷ್, ಜುಬೇರ್, ಮೊಹಮ್ಮದ್ ಕಲಾಮಿ, ಪಟೇಲ್, ನಬಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.