ನಾಯಕನಹಟ್ಟಿ:: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಮಹಾಶರಣ ಹರಳಯ್ಯ ಐಮಂಗಳ ಗುರುಪೀಠದ ಬಸವ ಶರಣ ಹರಳಯ್ಯ ಮಹಾಸ್ವಾಮಿಜಿಗಳು ನೇತೃತ್ವದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.

ಈ ವೇಳೆ ಬಸವ ಶರಣ ಹರಳಯ್ಯ ಸ್ವಾಮಿಗಳು ಮಾತನಾಡಿ ಮೇ 31ರಂದು ಬಸವ ಬುದ್ಧ ಅಂಬೇಡ್ಕರ್ ಹರಳಯ್ಯ ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನು ಚಿತ್ರದುರ್ಗ ಮುರುಘಾಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ
ಶ್ರೀ ಮಹಾಶರಣ ಹರಳಯ್ಯ ಪ್ರಶಸ್ತಿ-.

ಶ್ರೀ ಮಹಾಶರಣ ಹರಳಯ್ಯ ಯುವ ಪ್ರಶಸ್ತಿ .

ಶ್ರೀ ಮಹಾಶರಣ ಮಧುವರಸ ಪ್ರಶಸ್ತಿ.
ಶ್ರೀ ಮಹಾಶರಣ ಶೀಲವಂತ ಪ್ರಶಸ್ತಿ. ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು ಹಾಗೆ
ಎಲ್ಲಾ ಸಮುದಾಯದ ಜನರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮುದಾಯದವರಿಗೆ ಮುಖಂಡರಿಗೆ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಆಹ್ವಾನಿಸಿ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಪಾಲವ್ವನಹಳ್ಳಿ, ಬಿಜೆಪಿ ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ಶಿವದತ್ತ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಶಂಕರ್ ಸ್ವಾಮಿ, ಎನ್ ದೇವರಹಳ್ಳಿ ಟಿ ರಾಜಣ್ಣ, ಎತ್ತಿನಹಟ್ಟಿ ಓಬಣ್ಣ, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ್, ಬೋರೇಶ್, ಜಾಗನೂರಹಟ್ಟಿ ಮಂಜುನಾಥ್, ಆರ್ ತಿಪ್ಪೇಸ್ವಾಮಿ, ಜೋಗಿಹಟ್ಟಿ ವಿಶ್ವನಾಥ್, ಬಸವರಾಜ್, ನಲಗೇತನಹಟ್ಟಿ ಪಿ ಟಿ ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!