ಚಳ್ಳಕೆರೆ ಮೇ.26 : ನಾಯಕನಹಟ್ಟಿ ಹೋಬಳಿಯ ಎನ್ ಮಹದೇವಪುರ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೊರವಲಯದ ಹಂದಿ ಗುಂಟೆ ಹಳ್ಳದಲ್ಲಿ ಹೂಳೆತ್ತುವ ಕೆಲಸ ಕಳೆದ ಸೋಮವಾರದಿಂದ ಪ್ರಾರಂಭವಾಗಿತ್ತು ಕೋವಿಡ್ ಸಂಕಷ್ಟದಲ್ಲಿ ನಲುಗಿದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದೆ ತಮ್ಮ ಗ್ರಾಮದಲ್ಲಿ ಕೆಲಸ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿ ಬಹುದೆ ಎಂದು ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಓಬಳೇಶ ಮಾತನಾಡಿ ಮಹಾಮಾರಿ ಕೊರೊನಾ ಇಡೀ ದೇಶವನ್ನೇ ತಲ್ಲಣಗೊಳಿಸಿದೆ ಸಂಕಷ್ಟಕ್ಕೆ ದುಡಿದ ಪರಿಸ್ಥಿತಿಯಲ್ಲಿ ಸರ್ಕಾರ ಕೂಲಿಕಾರರಿಗೆ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಹಾಗೆ ಗ್ರಾಮದ ಕೂಲಿಕಾರರು ಪ್ರತಿದಿನ ಕೆಲಸಕ್ಕೆ ಬಂದು ಕೂಲಿ ಮಾಡುವ ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ ತಿಪ್ಪೇಸ್ವಾಮಿ, ಶ್ವೇತಾ ಪಿ ಜಿ ಬೋರ್ ನಾಯಕ, ಸೈಯದ್ ಆಕ್ಟರ್ ಬಾನು, ಬಿ ಎಫ್ ಟಿ ಚಿದಾನಂದ ಜಿ ಎಂ, ಕಾಯಕ ಮಿತ್ರ ಭವ್ಯ, ಮೇಟಿ ಗಳು ಬಾಬು, ನಾಗರಾಜ್, ಕಮಲಾಕ್ಷಿ, ಗುಂಡ ಬೋರಯ್ಯ, ಗ್ರಾಮಸ್ಥರಾದ ಮಂಜಣ್ಣ, ಕಾಮಯ್ಯ, ಸುರಯ್ಯ, ರಾಜಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಇನ್ನು ಮುಂತಾದವರು ಉಪಸ್ಥಿತರಿದ್ದರು