ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ,
ತಾಯಿಯಂತೆ ಕನ್ನಡವನ್ನು ಪ್ರೀತಿಸಿ : ಶಾಸಕ ಟಿ.ರಘುಮೂರ್ತಿ ಕರೆ
ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಹಳೇ ನಗರದಲ್ಲಿ ಶ್ರೀ ವೀರಭದ್ರಸ್ವಾಮಿ ಯುವಕರ ಸ್ನೇಹ ಬಳಗ ಹಳೇ ನಗರ ಇವರ ವತಿಯಿಂದ ಚಳ್ಳಕೆರೆ ನಗರದ ಹಳೇ ನಗರದಲ್ಲಿ ನಡೆದ 10ನೇ ಬಾರಿಗೆ ಯಶಸ್ವಿ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದಶಕಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಅನ್ಯಭಾಷೆಯನ್ನು ಕಲಿಯಬೇಕೆಂದು ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತÀವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡು ತಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆದರು ಇದನ್ನು ಮನಗಂಡ ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸಾಧ್ಯವಾಯಿತು ಎಂದರು.
ನಗರಸಭೆಯ ನೂತನ ಸದಸ್ಯೆ ಶಿಲ್ಪ ಮುರುಳಿಧರ್ ಮಾತನಾಡಿ ಕನ್ನಡ ನೆಲ,ಜಲ, ಭಾಷೆಗೆ ಒತ್ತು ನೀಡಬೇಕು, ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮುಗ್ಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮ ಫಲಕರಗಳನ್ನು ಹಾಕಬೇಕು, ಪ್ರತಿಯೊಬ್ಬರ ಮನೆ ಮನಗಳಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬದ ವಾತಾವರಣ ನಿರ್ಮಿಸುವಂತಾಗಬೇಕು ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುವಂತೆ ಹಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವಕರ ಸ್ನೇಹ ಬಳಗ ಅಧ್ಯಕ್ಷರಾದ ಪಿ.ಎಂ. ಪ್ರದೀಪ್ ಕುಮಾರ್, ಉಪಾಧ್ಯಕ್ಷರಾದ ಬಿ.ವಿ.ಸಂತೋಷ್ ಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಹೊಯ್ಸಳ ಗೋವಿಂದ, ಶಿಲ್ಪ ಮುರುಳೀಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ಮುರುಳೀಧರ್, ಪ್ರಸನ್ನಕುಮಾರ್, ನಾಗರಾಜ್, ಸುಧಾ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಯುವಕ ಸಂಘದ ಪದಾಧಿಕಾರಿಗಳು, ಉಪಸ್ಥಿತರಿದ್ದರು.