ಚಳ್ಳಕೆರೆ : ಮಕ್ಕಳಿಗೆ ಪಾಠ ಮಾಡದೆ ಸುಖ ಸುಮ್ಮನೆ ರಾಜಕೀಯ ಮಾಡ್ಕೊಂಡು ತಿರುಗಾಡುವಂತಹ ಶಿಕ್ಷಕರು ಇದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೀಶ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರು ಶೌಚಾಲಯ ಒದಗಿಸಬೇಕು, ಒಂದು ವೇಳೆ ಕುಡಿಯುವ ನೀರು, ಶೌಚಾಲಯದಿಂದ ವಂಚಿತವಾದAತಹ ಶಾಲೆಗಳು ಪಟ್ಟಿನೀಡಿ ಕುಡಿಯುವ ನೀರು ಯೋಜನೆಯ ಜೆಜೆಎಂ ಯೋಜನೆಯಲ್ಲಿ ಪ್ರತಿ ಶಾಲೆಗೂ ಕುಡಿಯುವ ನೀರು ಯೋಜನೆ ಒದಗಿಸಲಾಗುತ್ತದೆ ಹಾಗೂ ಕೇವಲ ಪೈಪ್ ಲೈನ್ ಅಳವಡಿಸಿ ಕೈಬಿಟ್ಟರೆ ಸಾಲದು ಸಿಂಟೆಕ್ಸ್ ಹಾಗೂ ಶೌಚಾಲಯ ನಿರ್ಮಿಸಿ ಎಂದರು.
ಇನ್ನು ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ಸಭೆಯಲ್ಲಿ ಕೇಳಿದಾಗ ಚಳ್ಳಕೆರೆ ಹಿಂದುಳಿದ ತಾಲೂಕು, ಕನಿಷ್ಠ ಫಲಿತಾಂಶವನ್ನು ಪಡೆದಂತಹ ಹತ್ತು ಶಾಲೆಗಳ ಜೊತೆಗೆ ಒಟ್ಟು 62 ಶಾಲೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡುವ ಮೂಲಕ ಆ ಶಾಲೆಗಳಿಗೆ ಭೇಟಿ ನೀಡುವುದು ಹಾಗೂ ಮಕ್ಕಳ ಫಲಿತಾಂಶಕ್ಕೆ ಒತ್ತು ನೀಡುವುದು, ಆದ್ದರಿಂದ ಪ್ರತಿಯೊಬ್ಬ ಅಧಿಕರಿಗೂ ತಲಾ ಮೂರು ಶಾಲೆಯನ್ನು ದತ್ತು ನೀಡುವುದರ ಮೂಲಕ ಈ ವರ್ಷದ ಫಲಿತಾಂಶಕ್ಕೆ ಒತ್ತು ನೀಡಲಾಗಿದೆ, ಅತೀ ಕಡಿಮೆ ಪಲಿತಾಂಶ ಹೊಂದಿರುವAತಹ ಶಾಲೆಗಳ ಮಕ್ಕಳಿಗೆ ಅಲ್ಲಿನ ಶಿಕ್ಷಕರಿಗೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಸಭೆಯ ಗಮನಕ್ಕೆ ತಂದರು, ನಂತರ ತಾಲೂಕಿನಲ್ಲಿ ಸುಮಾರು 288 ಶಾಲಾ ಕೊಠಡಿಗಳ ಅವಶ್ಯಕತೆ ಇದೆ ನಾಯಕನಹಟ್ಟಿ ಹೋಬಳಿ ಹಾಗೂ ತಳಕು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕೊಟ್ಟೆಗಳ ಅಗತ್ಯವಿದೆ ಎಂದು ಮಾಹಿತಿ ನೀಡಿದರು.
ಇನ್ನೂ ಪಂಚಾಯತ್ ಇಂಜಿನಿಯರಿAಗ್ ಇಲಾಖೆಯ ಇಂಜಿನಿಯರ್, ತಾಲೂಕಿನಲ್ಲಿ ಸುಮಾರು 316 ಗ್ರಾಮಗಳು ಜೆಜೆಎಂ ಯೋಜನೆಯಲ್ಲಿ ಒಳಪಟ್ಟಿವೆ, ಅದರಲ್ಲಿ ಸುಮಾರು 103 ಕಾಮಗಾರಿ ಮುಗಿದಿವೆ, ಇನ್ನು ಉಳಿದ ಹಲವು ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ ಒಟ್ಟಾರೆ ಕಾಮಗಾರಿಯನ್ನು ಮುಂದಿನ ವರ್ಷ ಮಾರ್ಚ್2025ರ ವೇಳೆಗೆ ಸಂಪೂರ್ಣವಾಗಿ ಕಾಮಗಾರಿ ಮುಗಿಸಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುತ್ತೇವೆ ಎಂದು ಸಭೆಯ ಗಮನಕ್ಕೆ ತಂದಾಗ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೀಶ ಮಾತನಾಡಿ, ಕೇವಲ ಸಭೆಯಲ್ಲಿ ಹೇಳುವುದು ಅಷ್ಟೆ ಅಲ್ಲ ಇದು ಮುಂದಿನ ಸಭೆಯಲ್ಲಿ ಕೇಳಾಗುತ್ತದೆ ನಿಖರವಾದ ಮಾಹಿತಿ ನೀಡಿ, ಪ್ರತಿ ತಿಂಗಳ ಸಭೆ ನಡೆಸಲಾಗುತ್ತದೆ ಎಂದರು.
ಇನ್ನೂ ನಗರಸಭೆಯ ಇಂಜಿನಿಯರ್ ವಿನಯ್ ಕುಮಾರ್ ಸಭೆಗೆ ಮಾಹಿತಿ ನೀಡುತ್ತಾ ಚಳ್ಳಕೆರೆ ನಗರಸಭೆಯಲ್ಲಿ ಸುಮಾರು ಎರಡು ಕೋಟಿ ಸ್ಥಳೀಯ ಸಂಪನ್ಮೂಲ ಆದಾಯವಿದೆ ಇದರ ಜೊತೆಗೆ ಎಸ್‌ಇಪಿ ಟಿಎಸ್‌ಪಿ ಅನುದಾನ ಕೂಡ ಸದ್ಬಳಕೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದಾಗ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೀಶ ಮಾತನಾಡಿ, ನಗರದಲ್ಲಿ ಕೇವಲ ರಸ್ತೆ ಚರಂಡಿ ಎಂದು ಗುತ್ತಿಗೆ ನೀಡುವಂತಹ ಕಾಮಗಾರಿಗಳನ್ನು ಕೊಡದೆ ಸಾರ್ವಜನಿಕವಾಗಿ ವಿದ್ಯಾರ್ಥಿಗಳಿಗಾಗಿ ಉಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿ ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯಾರ್ಥಿನಿಲಯಗಳಿಗೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಹಾಗೂ ಮೆಡಿಕಲ್ ಕೋರ್ಸ್ಗಳಿಗಾಗಿ ಅವರಿಗೆ ಅವಶ್ಯವಾದಂತ ಬುಕ್ ಮೆಟೀರಿಯಲ್ ಖರೀದಿಸಲು ಅವರಿಗೆ ನಗರಸಭೆ ವತಿಯಿಂದ ಅನುದಾನ ನೀಡಿ ಅವರ ಭವಿಷ್ಯಕ್ಕೆ ಅಧಿಕಾರಿಗಳು ದಾರಿದೀಪವಾಗಿ ಎಂದು ಹೇಳಿದರು.
ಪ್ರತಿಯೊಂದು ಇಲಾಖೆಯೂ ಇಲಾಖಾ ಮಧ್ಯದಲ್ಲಿ ಸಾಮ್ಯತೆ ಹೊಂದಬೇಕು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆ ಸಾಮ್ಯತೆ ಇರುವುದರಿಂದ ಅನುದಾನ ಸದ್ಬಳಕೆಯಾಗಿ ಕನಿಷ್ಠ ಬಡ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಅಧಿಕಾರಿಗಳು ರೂಪಿಸಬೇಕು ಎಂದು ಹೇಳಿದರು
ಹೇಳಿಕೆ :
ತಾಲೂಕು ಮಟ್ಟದ ಅಧಿಕಾರಿಗಳ ತಾತ್ಸರವೋ ಅಥವಾ ನಿರ್ಲಕ್ಷವೋ ಸಭೆಗೆ ಕಛೇರಿಯ ಸಿಬ್ಬಂದಿಯನ್ನು ನಿಯೋಜಿಸಿದರೆ ಮಾಹಿತಿ ಯಾರಿಂದ ಪಡೆಯಬೇಕು, ಮುಂದಿನ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕುದ್ದಾಗಿ ಸಭೆಗೆ ಹಾಜರಾಗಬೇಕು, ಒಂದು ವೇಳೆ ತಹಶೀಲ್ದಾರ್ ಮಳೆ ಬರೆಯಬೇಕಾಗುತ್ತದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ರವರಿಗೆ ಸೂಚಿಸಿದರು, ಇನ್ನೂ ಕೆಲ ಅಧಿಕಾರಿಗಳು ನಾಗಮೋಹನ್ ದಾಸ್ ವರದಿ ಸಭೆಗೆ ತೆರಳಿದ್ದಾರೆ ಎಂದು ಹೇಳಿದಾಗ ಅಂತಹ ಅಧಿಕಾರಿಗಳು ಒರತು ಪಡಿಸಿ ಬೇರೆ ಇಲಾಖೆಯ ಅಧಿಕಾರಿಗಳು ಬರಬೇಕಲ್ಲವೆ, ತಾಲೂಕು ಅಭಿವೃದ್ದಿಗೆ ಪ್ರತಿಯೊಂದು ಇಲಾಖೆಯ ಮಹತ್ವ ಅಗತ್ಯವಾಗಿದೆ,
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ತಾಪಂ.ಸಹಾಕ ನಿದೇರ್ಶಕ ಸಂಪತ್ ಕುಮಾರ್, ಬಿಸಿಎಂ ಅಧಿಕಾರಿ, ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.