ವಾಲ್ಮೀಕಿ, ಸಮಸ್ತ ಮನುಕುಲಕ್ಕೆ ಆದರ್ಶ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಅವರು ಸಮಸ್ತ ಮನುಕುಲಕ್ಕೆ ಆದರ್ಶಪ್ರಾಯವಾದ ರಾಮಾಣ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ಶಾಸಕ ಟಿ.ರಘುಮೂರ್ತಿ
ಅಭಿಪ್ರಾಯಪಟ್ಟರು.

ನಗರದ ವಾಲ್ಮೀಕಿ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಜಯಂತಿಗೆ
ವಾಲ್ಮೀಕಿ ಪುತ್ಥಳಿಗೆ ಹೂವಿನ ಹಾರ ಹಾಕುವುದರ ಮೂಲಕ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತೋತ್ಸವ ಆಚರಣೆಗೆ ಅರ್ಥ ಬರುತ್ತದೆ ಇವರ ಆದರ್ಶದಂತೆ ಪಕ್ಷ ಬೇದ ಮರೆದು ಎಲ್ಲಾ ಜಯಂತೋತ್ಸವದಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಸೂರ್ಯ ಮಾತನಾಡಿ, ಮಹರ್ಷಿ
ವಾಲ್ಮೀಕಿ ಅಹಿಂಸಾ ತತ್ವದ ಮಹತ್ವವನ್ನು ತೋರಿಸಿಕೊಟ್ಟ ಮಾಹಾಪುರಷರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲಾರೂ ಹೋಗಬೇಕು ಎಂದರು.

ಪ್ರಸ್ತಾವಿಕವಾಗಿ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಸಮುದಾಯದವರು ಸೇರಿ ಆಚರಣೆ ಮಾಡಿದಾಗ ಜಯಂತಿಗೆ ಅರ್ಥ ಬರುತ್ತದೆ, ಈಡಿ ಜಗತ್ತಿಗೆ ರಾಮಾಯಣದಂತಹ ಮಹಾ ಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಇಡೀ ಮನುಕುಲದ ಆಸ್ತಿ ಎಂದು ಎಂದು ಕಿವಿಮಾತು ಹೇಳಿದರು.

ಇದೇ ಸಂಧರ್ಭದಲ್ಲಿ ಡಿಜೆ ಸದ್ದಿಗೆ ಹದಿಹರೆಯದ ಯುವಕರು ಹಾಗೂ ಯುವತಿಯರು ಹೆಜ್ಜೆ ಹಾಕಿದರು, ಮೆರವಣಿಗೆ ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಜ್ಜಿಗೆಯನ್ನು ‌ಮದಕರಿ‌ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಸೂರ್ಯ ಆಯೋಜನೆ ಮಾಡಿದ್ದರು. ಅಭಿಮಾನಿಗಳು ವ್ಯವಸ್ಥಿತವಾಗಿ ‌ಮೆರವಣಿಗೆಯಲ್ಲಿ ಹಂಚಿದರು.

ಕಾರ್ಯಕ್ರಮದಲ್ಲಿ
ನಗರಸಭೆ‌‌‌ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ,
ಸದಸ್ಯರಾದ ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶ್‌ಗೌಡ, ಪ್ರಕಾಶ್‌ವೈ, ಆರ್.ರುದ್ರನಾಯ್ಕ, , ಕವಿತಾ, ಸುಮಾ, ಜಯಣ್ಣ, ಎಂ.ಜೆ.ರಾಘವೇAದ್ರ, ಹೆಚ್.ಸಿ.ವಿರುಪಾಕ್ಷ, ಮಂಜುಳಾಪ್ರಸನ್ನಕುಮಾರ್, ಚಳ್ಳಕೆರೆಪ್ಪ, ಕೆ.ವೀರಭದ್ರಯ್ಯ, ವಿಶುಕುಮಾರ್, ಶ್ರೀನಿವಾಸ್, ಗಾಂಧಿನಗರಕೃಷ್ಣಮೂರ್ತಿ, ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳು ಮುಂಖಡರುಗಳು ಪಾಲ್ಗೊಂಡಿದ್ದರು.

ಫೋಟೊ, ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಶಾಸಕ ಟಿ.ರಘುಮೂರ್ತಿ ಪುತ್ಥಳಿಗೆ ಹೂವಿನ ಮಾಲೆ ಹಾಕಿ, ಡಿಜೆ ಮೆರವಣಿಗೆಯಲ್ಲಿ ಭಾಗವಹಿಸಿದರು.

About The Author

Namma Challakere Local News
error: Content is protected !!