ಚಳ್ಳಕೆರೆ : ಬಯಲು ಸೀಮೆಯಲ್ಲಿ ಮುಂದುವರೆದ ಮಳೆರಾಯನ ಆರ್ಭಟಕ್ಕೆ ಚಳ್ಳಕೆರೆ ನಗರ ತತ್ತರ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಿಟ್ಟುಬಿಡದ ವರ್ಣನ ಆರ್ಭಟಕ್ಕೆ ನಗರದ ಜನತೆ ತಲ್ಲಣಗೊಂಡಿದ್ದಾರೆ, ತಗ್ಗು ಪ್ರದೇಶದ ನಿವಾಸಿಗಳ ಗೋಳು, ಚಿಂತಾ ಜನಕವಾಗಿದೆ.
ಚಳ್ಳಕೆರೆ ನಗರದ ಹಲವು ವಾರ್ಡ್ ಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡು ಸಾರ್ವಜನಿಕರ ಪರಿಸ್ಥಿತಿ ಅದೋಗತಿಯಾಗಿದೆ.
ಇನ್ನು ನಗರದ ಹಳೆ ಟೌನ್ ಪಾದಗಟ್ಟೆ ಸಮೀಪದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ,
ಇನ್ನು ನಗರದಲ್ಲಿ ಉಳು ತುಂಬಿದ ಚರಂಡಿಗಳು ಮುಚ್ಚಿ ಹೋಗಿದ್ದು ರಸ್ತೆ ಮೇಲೆ ಮಳೆ ನೀರು ಜೊತೆಗೆ ಕೊಳಚೆ ನೀರು ಸಮೇತ ಹರಿಯುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರಿಗೆ ತೊಂದರೆ ಆಗಿದೆ.
ಇದೇ ರೀತಿಯಲ್ಲಿ ಅಂಬೇಡ್ಕರ್ ನಗರ, ಗಾಂಧಿನಗರ , ಸೂಜಿ ಮಲ್ಲೇಶ್ವರ ನಗರ,, ವೆಂಕಟೇಶ್ವರ ನಗರ , ಅಭಿಷೇಕ್ ನಗರದ, ಮೈರಾಡ ಕಾಲೋನಿ , ರಹೀ ನಗರ ಹೀಗೆ ಹಲವು ವರ್ಡ್ ಗಳಲ್ಲಿ ಕೆಲಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ.