ಚಳ್ಳಕೆರೆ : ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಒಕ್ಕೂಟದ
ಕಲ್ಯಾಣ ಟ್ರಸ್ಟ್ ನಿಂದ ಒಳ್ಳೆಯ ಪ್ರಯೋಜನಗಳು ಇವೆ, ಇವುಗಳನ್ನು , ಬಳಸಿಕೊಂಡು ‌ಆರ್ಥಿಕಮವಾಗಿ ಮುಂದೆ ಬನ್ನಿ
ಎಂದು ಶಿವಮೊಗ್ಗ, ಹಾಲು ಒಕ್ಕೂಟದ ನಿರ್ದೇಶಕರಾದ ಬಿ,ಸಿ, ಸಂಜೀವ ಮೂರ್ತಿ ತಿಳಿಸಿದರು

ನಗರದ ಬೆಂಗಳೂರು ರಸ್ತೆಯಲ್ಲಿರುವ ನರಹರಿ ನಗರದ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ
ತಾಲೂಕಿನ ಬಾಲೇನಹಳ್ಳಿ ಮತ್ತು ನರಹರಿ
ನಗರ ಸಂಘಗಳ ಹಾಲು ಉತ್ಪಾದಕರ ಅವಲಂಬಿತರಿಗೆ ಒಕ್ಕೂಟದ
ಕಲ್ಯಾಣ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕ ಸಂಘದ ಸದಸ್ಯರು
ಅನಾರೋಗ್ಯದಿಂದ ಮರಣ ಹೊಂದಿದ ಪರಿಹಾರ ಮೊತ್ತದ ಒಂದು ಲಕ್ಷ.
ರೂಪಾಯಿಗಳು ಚೆಕ್ಕುಗಳನ್ನು ವಿತರಿಸಿ ಮಾತನಾಡಿದರು.

ಕಷ್ಟದ ಸಮಯದಲ್ಲಿ ರೈತರ ಹಸುಗಳು ಹಾಗೂ ನಿರ್ವಹಣೆ ಮಾಡುವ ರೈತರು‌ ಅಕಾಲಿಕ ಮರಣಕ್ಕೆ ತುತ್ತಾದ ಸಂಧರ್ಭದಲ್ಲಿ ಕಲ್ಯಾಣ ಟ್ರಸ್ಟ್‌ ವತಿಯಿಂದ ಈ ಹಣವನ್ನು ನೀಡಲಾಗುತ್ತದೆ,
ಈ ಮೊತ್ತವನ್ನು ರಾಸುಗಳನ್ನು ಹೊಸದಾಗಿ ಕೊಳ್ಳುವಿಕೆಗೆ ಬಳಸಿಕೊಂಡು ಇನ್ನು
ಹೆಚ್ಚಿನ ಪ್ರಯೋಜನ ಪಡೆಯಬೇಕು, ಈಗೇ ಸಂಕಷ್ಟ ಸಮಯದಲ್ಲಿ ನಮ್ಮ ಸಂಘವು ಸದಾ ನಿಮ್ಮೊಂದಿಗೆ ಬೆಂಬಲವಾಗಿ ನಿಂತು ರೈತರ ಒಡನಾಡಿಯಾಗಿರುತ್ತದೆ ಎಂದರು.

ಇದೇ
ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್,
ಬಾಲೇನಹಳ್ಳಿ, ಹಾಲು ಉತ್ಪಾದಕರ ಕಾರ್ಯದರ್ಶಿ ರಾಜಣ್ಣ,
ಸದಸ್ಯರು ಹಾಗೂ ನರಹರಿ ನಗರದ ಹಾಲು ಉತ್ಪಾದಕರ ಮುಖ್ಯ
ಕಾರ್ಯನಿರ್ವಾಹಕ ಎಚ್, ಜಯಣ್ಣ, ಸದಸ್ಯರಾದ ಶಿವಣ್ಣ,
ವೀರಣ್ಣ, ವಿಶ್ವನಾಥ.ಜಿ , ಬಸವರಾಜ, ಟಿ.ಕುಮಾರಸ್ವಾಮಿ, ಸಿಬ್ಬಂದಿ ವರ್ಗ
ಉಪಸ್ಥಿತರಿದ್ದರು

About The Author

Namma Challakere Local News
error: Content is protected !!