ಚಳ್ಳಕೆರೆ :

ಹೆಣ್ಣುಮಕ್ಕಳಿಗೆ ‌ವರದಾನವಾದ ಭಾಗ್ಯ ಲಕ್ಷ್ಮಿ ಯೋಜನೆ ಸರಕಾರದ ಮುಖ್ಯ ಯೋಜನೆಯಾಗಿದೆ,

ಭಾಗ್ಯ ಲಕ್ಷ್ಮಿ ಯೋಜನೆ ಹೊಸದಾಗಿ ಜಾರಿಯಾದ ದಿನದಿಂದ ಜನಿಸಿದ ಮಕ್ಕಳು 2024 ನೇ ಸಾಲಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯ್ದ ಫಲಾನುಭಿಗಳಿಗೆ ಬಾಂಡ್ ವಿತರಣೆಯನ್ನು ತಾಲೂಕು ಸಿಡಿಪಿಓ ಅಧಿಕಾರಿ ಹರಿಪ್ರಸಾದ್ ವಿತರಿಸಿ‌ ಮಾತನಾಡಿದರು‌.

ನಗರದ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಯ್ದ ಎಲ್ಲಾ ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿದರು.

ಫಲಾನುಭವಿಗಳ ವಾಸ್ತವತೆ, ನೈಜತೆಯನ್ನು ಹರಿತು ಬಾಂಡ್ ವಿತರಿಸಲಾಗಿದೆ, ತಾಲ್ಲೂಕಿನಲ್ಲಿ ಸುಮಾರು 205 ಜನ ಫಲಾನುಭವಿಗಳು ಇದ್ದಾರೆ, ಇದರಲ್ಲಿ ಮರಣ ಹೊಂದಿದವರು ಹಾಗೂ ವಿಕಲತೆಯಿಂದ ಬಳಲುವವರನ್ನು ಗುರುತಿಸಿ ಆಯ್ದ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡಿ ಎಲ್ಲಾ ಅರ್ಹ ರಿಗೆ ಬಾಂಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.

About The Author

Namma Challakere Local News
error: Content is protected !!