ಚಳ್ಳಕೆರೆ :
ಮುಳ್ಳಿನ ರಾಶಿ ಮೇಲೆ ಬಿದ್ದು ಹರಕೆ
ತೀರಿಸಿದ ಭಕ್ತರು
ಹೊಳಲ್ಕೆರೆಯ ಉಪ್ಪಾರಹಟ್ಟಿ ಹಾಗೂ ಹೊಸಹಟ್ಟಿಯಲ್ಲಿ
ಗ್ರಾಮದಲ್ಲಿಂದು ಅಂತರಗಟ್ಟೆಮ್ಮನ ಮುಳ್ಳಿನ ಪವಾಡ ವನ್ನು
ಆಚರಿಸಲಾಯಿತು.
ದೇವಿ ಅಂಬಿನೋತ್ಸವ ಮುಗಿಸಿ ನೇರವಾಗಿ
ದೇವಿ, ಪಲ್ಲಕ್ಕಿ ಉತ್ಸವದೊಂದಿಗೆ ಮುಳ್ಳಿನ ರಾಶಿ ಬಳಿ
ಆಗಮಿಸಿತು.
ದೇವಿಯನ್ನು ಮೊದಲು ಮುಳ್ಳಿನ ರಾಶಿ ಮೇಲೆ ಕೆಲ
ನಿಮಿಷ ಪ್ರತಿಷ್ಠಾಪಿಸಲಾಯಿತು.
ನಂತರ ವಿಧಿ ವತ್ತಾಗಿ ಪೂಜೆ
ಸಲ್ಲಿಸಲಾಯಿತು. ಪಲ್ಲಕ್ಕಿ ಹೊತ್ತ ಭಕ್ತರು ಹಾಗೂ ದೇವಿಯು
ಮೈಮೇಲೆ ಬಂದಂತಹ ಭಕ್ತರು ಮುಳ್ಳಿನ ರಾಶಿ ಮೇಲೆ ಅಂಗಾತ
ಬೀಳುವ ಮೂಲಕ ಹರಕೆ ತೀರಿಸಿದರು.