ವಿಜೃಂಭಣೆಯಿಂದ ಜರುಗಿದ ಮೈಲಾರಲಿಂಗೇಶ್ವರ ಸ್ವಾಮಿಯ ದೋಣಿ ಸೇವೆ
ಚಳ್ಳಕೆರೆ :ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುಧ ಪೂಜೆ ಅಂಗವಾಗಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಶನಿವಾರ ಸಂಜೆ ಹೊಳೆ ಪೂಜೆ ಮುಗಿಸಿ ನಂತರ ಬನ್ನಿ ಮುಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗುಡಿದುಂಬಿತು.
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಸ್ಥಾನದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಪ್ರತಿ ವರ್ಷದಂತೆ ಈ ವರ್ಷ ಗೊರವಗಳ (ದೋಣಿ) ಸೇವೆ ಸಂಭ್ರಮ ವಿಜೃಂಭಣೆಯಿಂದ ಜರುಗಿತು.
ದೋಣಿ ಸೇವೆಗೆ ಗೊರವಗಳರಾದ ಸುಮಾರು 50ಕ್ಕೂ ಹೆಚ್ಚು ಗೊರವಗಳು ಭಾನುವಾರ ಬೆಳಿಗ್ಗೆ 9 ಗಂಟೆಗೆ ಗಂಗಾಸ್ನಾನ ಮುಗಿಸಿ 10ಗಂಟೆಗೆ ಸರಿಯಾಗಿ ನಡೆಮುಡಿಯೊಂದಿಗೆ ಏಳುಕೋಟಿ ಮೈಲಾರಲಿಂಗೇಶ್ವರ ಚಾಂಗಮಲೋ ಎಂಬ ಘೋಷಣೆಗಳೊಂದಿಗೆ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಬರುತ್ತಾರೆ.
ನಂತರ ಗೊರವಗಳ ದೋಣಿ ಹಾಗೂ ತಾಮ್ರಗಳ ಪಾತ್ರೆಗಳಲ್ಲಿ ಭಕ್ತರು ತಂದ ಬಾಳೆಹಣ್ಣು, ಹಾಲು, ಸಕ್ಕರೆ, ತುಪ್ಪ ಶ್ರದ್ಧೆ, ಭಕ್ತಿಯಿಂದ ದೋಣಿಗಳಿಗೆ ಹಾಕುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ಗೊರವಗಳು ಢಮರುಗಳನ್ನು ಹಿಡಿದು ಭಕ್ತರು ಹಾಕಿದ ಬಾಳೆಹಣ್ಣು, ಹಾಲು, ತುಪ್ಪಗಳ ದೋಣಿಗಳನ್ನು ಸುತ್ತು ಏಳು ಕೋಟಿ ಚಾಂಗಮಲೋ ಘೋಷಣೆಗಳನ್ನು ಹಾಕುತ್ತಾರೆ.
ಗೊರವಗಳರು ದೋಣಿಗಳಿಗೆ ಪೂಜೆ ಪುರಸ್ಕಾರ ಮುಗಿದ ನಂತರ ಗೊರವುಗಳು ದೋಣಿಗಳಿಗೆ ಬಾಯಿ ಹಾಕಿ ಎಂಜಲು ಮಾಡಿದಾಗ ಅವುಗಳನ್ನು ತೆಗೆದು ಭಕ್ತರಿಗೆ ವಿತರಿಸುತ್ತಾರೆ. ಈ ಗೊರವಳ ದೋಣಿ ಸೇವೆ ಪೂರ್ವಜರ ಕಾಲದಿಂದಲೂ, ಶ್ರದ್ಧಭಕ್ತಿಯಿಂದ ಈ ಕಲೆಯನ್ನು ಇಂದಿಗೂ ಉಳಿದುಕೊಳ್ಳುವ ಮೂಲಕ ದೋಣಿ ಸೇವೆಯನ್ನು ಅಚಾರಣೆಯನ್ನು ನೆನೆಸಿಕೊಂಡು ಬಂದಿದ್ದಾರೆ.