ಚಳ್ಳಕೆರೆ :
ವರುಣ ಕರುಣೆ ತೋರಿದರೆ ಮಾತ್ರ ಮನುಷ್ಯ ಸಂಕುಲ ಉಳಿಯುತ್ತದೆ ಆದರಂತೆ ನೀರಿನ ಮೂಲಗಳನ್ನು ನಾವುಗಳು ಮೊದಲು ಸಂರಕ್ಷಿಸಬೇಕು, ಪ್ರತಿ ಗ್ರಾಮಗಳಲ್ಲಿ ಈ ತೆರನಾದ ಕೆರೆಗಳು ತುಂಬಬೇಕು ಆಗ ಮಾತ್ರ ನೀರಿನ ಕೊರತೆ ಇಲ್ಲದೆ ಬಯಲು ಸೀಮೆ ಹಸಿರುಕಣದತ್ತ ಮುಖ ಮಾಡುತ್ತದೆ
ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ನಗರಂಗೆರೆ ಕೆರೆಯು ಕೋಡಿಬಿದ್ದಿರುವ ಕಾರಣ ಬಾಗಿನ ಅರ್ಪಣೆ ಮಾಡಿ ಮಾತನಾಡಿದರು, ಮಳೆರಾಯನ ಕೃಪೆಗೆ ತಾಲೂಕಿನಲ್ಲಿ ಹಲವು ಕೆರೆಕಟ್ಟೆಗಳು ತುಂಬಿ ಹರಿಯುತ್ತವೆ. ಚಳ್ಳಕೆರೆ ತಾಲೂಕಿನಲ್ಲಿ ಕೇವಲ ಮುನ್ನೂರು ಹೆಕ್ಟೇರ್ ಇದ್ದ ತೋಟಗಾರಿಕೆ ವಿಸ್ತಿರ್ಣ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತಾರವಾಗಿದೆ ಈಗೇ ಬಯಲು ಸೀಮೆಯ ರೈತರು ಹಸಿರುಕರಣದತ್ತ ಮುಖ ಮಾಡಬೇಕು ಎಂದು ಹೇಳಿದರು.
ಕೆರೆ
ಕಟ್ಟೆ, ಕಾಲುವೆಗಳು ತುಂಬಿದರೆ ಅಂರ್ತಲ ಹೆಚ್ಚಳವಾಗಿ
ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನಸಮಸ್ಯೆ
ನೀಗುತ್ತದೆ ಪೂರ್ವಜನರು ನಿರ್ಮಿಸಿದ ಕೆರೆ ಕಟ್ಟೆಗಳನ್ನು
ಮುಂದಿನ ಪೀಳಿಗೆಗೆ ರಕ್ಷಣೆ ಮಾಡುವುದು ಎಲ್ಲರ
ಹೊಣೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು,
ಉಪಾಧ್ಯಕ್ಷರು, ಸದಸ್ಯರು.ಮಾಜಿ ತಾಪಂ ಅಧ್ಯಕ್ಷರ ಗದ್ದುಗೆ ತಿಪ್ಪೇಸ್ವಾಮಿ, ಹಾಗೂ
ಗ್ರಾಮಸ್ಥರು ಇತರರಿದ್ದರು.