ಚಳ್ಳಕೆರೆ ಅ.9 ‘ಸರ್ಕಾರದ ಎಲ್ಲ ಯೋಜನೆಗಳು ಗ್ರಾಮಲೆಕ್ಕಾಧಿಕಾರಿಗಳ ಮೂಲಕವೇ ಅನುಷ್ಠಾನ ಬಾಗು ತ್ತವೆ ಆದ್ದರಿಂದ ಜನರನ್ನು ಅಲೆದಾಡಿಸದೆ ಕೆಲಸ ಮಾಡಿಕೊಟ್ಟಾಗ ಮಾತ್ರ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದು ತಹಶೀಲ್ದಾರ್ ರೇಹಾನ್ ಪಾಷ ಕಿವಿ ಮಾತು ಹೇಳಿದರು.

ನಗರದ ಹಳೆ ತಾಲೂಕು ಕಚೇರಿ ಕಡ್ಡಡದ ಎರಡನೇ ಮಹಡಿ ಮೇಲೆ ಗ್ರಾಮಾಡಳಿತ ನೌಕರರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಗ್ರಾಮಲೆಕ್ಕಾಧಿಕಾರಿ ಅಯಾ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿ ನಂತರ ಅಲ್ಲಿ ಇಲ್ಲಿ ಕೂತು ಕಾಲ ಕಳೆಯುವ ಬದಲು ಗ್ರಾಮಾಡಳಿದ ಸಿಬ್ಬಂದಿಗಳ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಕೂತು ಬಡವರ, ರೈತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಿರಸ್ತೆದಾರ್ ಸದಾಶಿವಪ್ಪ ಮಾತನಾಡಿ ಎಲ್ಲಾ ಸರಕಾರಿ ಯೋಜನೆಗಳನ್ನು ಮೊಬೈಲ್ ಯ್ಯಾಪ್ ಮೂಲಕ ಅಫ್ ಲೋಡ್ ಮಾಡುವುದರಿಂದ ಸರಕಾರ ನಿಗಧಿ ಪಡಿಸಿರುವ ಕಾಲ ಮಿತಿಯೊಳಗೆ ಸರಿಯಾದ ಮಾಹಿತಿ ಅಫ್ ಲೋಡ್ ಮಾಡಿದಾಗ ಯಾವುದೇ ಸಮಸ್ಯೆ ಬರುವುದಿಲ್ಲ ಕಂದಾಯ ಇಲಾಖೆ ಒತ್ತಡದ ನಡುವೇಯೂ ರೈತರ ಜನಸಾಮಾನ್ಯರ ಕೆಲಸಗಳನ್ನು ಅಲೆದಾಡಿಸದೆ ಮಾಡಿಕೊಡುವಂತೆ ತಿಳಿಸಿದರು.

ತಳಕು ಕಂದಾಯ ನಿರೀಕ್ಷಕ ಲಿಂಗೇಗೌಡ,
ನಾಯಕನಹಟ್ಟಿ ಹೋಬಳಿ ಉಪತಹಶೀಲ್ದಾರ್ ಶಕುಂತಲಾ ಬಿ, ತಳಕು ಉಪ ತಹಶೀಲ್ದಾರ್ ರಫಿಸಾಬ್, ಕಸಬ , ಪರಶುರಾಂಪುರ ಹೋಬಳಿಯ ಉಪತಹಶೀಲ್ದಾರ್. ಕಂದಾಯ ನಿರೀಕ್ಚಕರು, ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!