ಅಪಾಯಕ್ಕೆ ಆಹ್ವಾನಿಸುವ ಪಟ್ಟಣದ ಮುಖ್ಯ ರಸ್ತೆ ರಸ್ತೆ ತುಂಬಿಲ್ಲ ತೊಗ್ಗುಂಡಿಗಳದೇ ದರ್ಬಾರ್ ಸೈಯದ್ ಮಾಬು ಗಂಭೀರ ಆರೋಪ.
ನಾಯಕನಹಟ್ಟಿ:: ಪಟ್ಟಣದಲ್ಲಿ ವಾಹನ ಸವಾರರ ನಿತ್ಯವೂ ಪರದಾಟ ರಸ್ತೆ ದುರಸ್ತಿಗೆ ಮುಂದಾಗುವವರೇ ಲೋಕೋಪಯೋಗ ಇಲಾಖೆ ಅಧಿಕಾರಿಗಳು ಎಂದು ಪಟ್ಟಣದ ಸೈಯದ್ ಮಾಬು ಹೇಳಿದ್ದಾರೆ.
ಬುಧವಾರ ಪಟ್ಟಣದ ವಾಲ್ಮೀಕಿ ವೃತ್ತದ ಮುಂಭಾಗದಲ್ಲಿರುವ ತೊಗ್ಗು ಗುಂಡಿಗಳನ್ನು ಸಾರ್ವಜನಿಕರ ಜೊತೆಗೂಡಿ ಜಲ್ಲಿ ಕಲ್ಲು ಮಣ್ಣು ತೊಗ್ಗು ಗುಂಡಿಗಳಿಗೆ ಹಾಕಿ ಮುಚ್ಚಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ 45ರ ತುಂಬೆಲ್ಲ ಗುಂಡಿಗಳು ಬಿದ್ದಿದ್ದು ಸುಗಮ ಸಂಚಾರಕ್ಕೆ ಅಡ್ಡಿ ಆಗಿದೆ ಇದು ಅಪಾಯಕ್ಕೂಆಹ್ವಾನ ನೀಡುವಂತಿದೆ.
ಹೌದು ನಾಯಕನಹಟ್ಟಿ ಪುಣ್ಯಕ್ಷೇತ್ರ ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇನ್ನೂ ಸುತ್ತಮುತ್ತಲೂ 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ ಪಟ್ಟಣದ ಮುಖ್ಯ ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳಿದೆ ದರ್ಬಾರ್ ವಾಹನ ಸವಾರರು ನಿತ್ಯವೂ ಪರಿತಪಿಸುವಂತಾಗಿದೆ.
ಇನ್ನೂ ರಾಜ್ಯ ಹೆದ್ದಾರಿಯೂ ಚಳ್ಳಕೆರೆ ಚಿತ್ರದುರ್ಗ ಬಳ್ಳಾರಿ ರಾಯದುರ್ಗ ಕಲ್ಯಾಣದುರ್ಗ ದಾವಣಗೆರೆ ಹೊಸಪೇಟೆ ಸಂಪರ್ಕ ಕಲ್ಪಿಸುತ್ತದೆ ಪಟ್ಟಣದಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಎರಡು ಮೂರು ಅಡಿ ಹಾಳದಷ್ಟು ಗುಂಡಿಗಳು ನಿರ್ಮಾಣವಾಗಿವೆ. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಪಟ್ಟಣದ ಸಾರ್ವಜನಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದರು ಕೂಡ ಲೋಕೋಪಯೋಗ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ .
ದಾವಣಗೆರೆ ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ಇರುವ ಅಕ್ಷಯ ಬಾರ್ ಮುಂಭಾಗದ ರಸ್ತೆ ವಾಲ್ಮೀಕಿ ವೃತ್ತದ ಬಳಿ ಗುಂಡಿಗಳು ಮತ್ತು ಅಂಬೇಡ್ಕರ್ ವೃತ್ತ ಬಳಿ ಒಳ ಮಠದ ಮುಂಭಾಗದಲ್ಲಿ ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದು ಪ್ರತಿ ದಿನ ಪಟ್ಟಣದಲ್ಲಿ ವಾಹನ ಸವಾಲು ಅರಸಹಾಸ ಪಡುವಂತಾಗಿದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗುವರೇ ಕಾದುನೋಡಬೇಕಾಗಿದೆ ಎಂದರು.
ಇದೆ ವೇಳೆ ಪಟ್ಟಣದ ಬಾಬು ಎಸ್ ಟಿ ಡಿ, ಡ್ರೈವರ್ ತಿಪ್ಪೇಸ್ವಾಮಿ, ರಾಜು ರೇಖಲಗೆರೆ, ಉಪಸ್ಥಿತರಿದ್ದರು