ಮೊಬೈಲ್ ಟಿವಿ ಯುಗದಲ್ಲಿ ಗ್ರಾಮೀಣ ಭಾಗದ ಕಲೆಗಳು ಕಣ್ಮರೆಯಾಗುತ್ತಿವೆ ಶಿಕ್ಷಕ ಕೆ.ಒ. ರಾಜಯ್ಯ,
ನಾಯಕನಹಟ್ಟಿ:: ನಾಡಿನ ಸಂಪತ್ತನ್ನು ಪ್ರತಿಬಿಂಬಿಸುವ ಕಲೆಗಳಾಗಿ ಹೊರಹೊಮ್ಮಬೇಕು ಎಂದು ಶಿಕ್ಷಕ ಕೆ.ಒ. ರಾಜಯ್ಯ ಹೇಳಿದರು.
ಸೋಮವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಶ್ರೀ ಕೊಲ್ಲಾರೇಶ್ವರಿ ನೂತನ ಶೀಲ ವಿಗ್ರಹ ಪ್ರತಿಷ್ಠಾಪನ ಅಂಗವಾಗಿ
ಶ್ರೀ ಬೋಸೆರಂಗಸ್ವಾಮಿ ನಾಟ್ಯಕಲಾ ಸಂಘ ಬೋಸೆದೇವರಹಟ್ಟಿ ಇವರಿಂದ ಸಾಮಾಜಿಕ ನಾಟಕ ರೂಚ್ಚಿಗೆದ್ದ ಪ್ರೀತಿಯ ಹುಚ್ಚ ಅರ್ಥಾರ್ಥ ಹತ್ತೂರ ಒಡೆಯ ನಾಟಕವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದ ಯುವಕರು ಮೊಬೈಲ್ ಟಿವಿ ಗಿಳಿಗೆ ಬಿದ್ದಿದ್ದಾರೆ ಗ್ರಾಮೀಣ ಪ್ರದೇಶದ ಕಲೆಗಳಾದ ಯಕ್ಷಗಾನ ಪೌರಾಣಿಕ ಬಯಲಾಟ ಭಜನೆ ಕೋಲಾಟ ಸಾಮಾಜಿಕ ಇಂತಹ ನಾಟಕಗಳನ್ನು ಉಳಿಸುವ ಕೆಲಸವಾಗಬೇಕಾಗಿದೆ ಸಂಗೀತ ಜೀವನದ ಒಂದು ಭಾಗ ಅದು ಕೇವಲ ಹಣದೊಂದಿಗೆ ಸೀಮಿತವಾಗದೆ ಸಾಮಾಜಿಕ ಬದಲಾವಣೆಗೆ ಪೂರಕವಾಗಿ ಕಲೆ ಸಂಸ್ಕೃತಿಯಾಗಬೇಕಾಗಿದೆ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಯುವ ಜನಾಂಗವು ಕೇವಲ ತಾಂತ್ರಿಕತೆಗೆ ಮಾರುಹೋಗದೆ ಕಲೆ ಸಂಸ್ಕೃತಿಯ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಇನ್ನೂ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ.ಬಿ. ಮುದಿಯಪ್ಪ ಮಾತನಾಡಿದ ಅವರು ಗ್ರಾಮದಲ್ಲಿ ಉತ್ತಮ ಪ್ರತಿಭೆ ಉಳ್ಳ ಕಲಾವಿದರಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ಕರೆತಂದು ಪ್ರೋತ್ಸಹಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ. ಓಬಯ್ಯ ದಾಸ್, ಶ್ರೀಮತಿ ಸುನಿತಾ ಜಿ ಬಿ ಮುದಿಯಪ್ಪ, ಪಿ. ಬೋಸಮ್ಮ ಮಂಜುನಾಥ್, ಅಬಕಾರಿ ತಿಪ್ಪೇಸ್ವಾಮಿ, ಊರಿನ ಮುಖಂಡರಾದ ಬಿ ಎಲ್ ಗೌಡ ಬಿ.ಡಿ. ಧನಂಜಯ, ಎನ್.ಬಿ. ಬೋಸಯ್ಯ, ಮಲ್ಲಕ್ ಬೋರಯ್ಯ, ಬಸವರಾಜ್, ಶಿಕ್ಷಕ ಪಿ.ಬಿ ಬೋಸಯ್ಯ, ಗಜ್ಜುಗಾನಹಳ್ಳಿ ಶಿಕ್ಷಕ ನಾಗರಾಜ್ ,ಬೊಮ್ಮಯ್ಯ ಮಣ್ಣಜ್ಜ, ಪಿ.ಬಿ ಬೋಸಯ್ಯ, ಮಾಜಿ ಸೈನಿಕ ಬಿ. ಬೋಸೆರಂಗಪ್ಪ, ಬಿ ಎಂ ಪ್ರಕಾಶ್, ಬಿ.ಗಂಡಯ್ಯ. ಚೌಳಕೆರೆ ತಿಪ್ಪೇಸ್ವಾಮಿ, ಸಂಗೀತ ನಿರ್ದೇಶಕ ದಿವಾಕರ್, ವಿನಾಯಕ ವಾದ್ಯ ವೃಂದ ಲಕ್ಲಹಳ್ಳಿ ಸೋಮ ಸಂಗಡಿಗರು. ಹಿನ್ನೆಲೆ ಗಾಯಕ ಮಾಲಹಳ್ಳಿ ತಿಪ್ಪೇಶ್, ಹಾಗೂ ಸಮಸ್ತ ಬೋಸೆದೇವರಹಟ್ಟಿ ಗ್ರಾಮಸ್ಥರು. ಉಪಸ್ಥಿತರಿದ್ದರು