ರೇಷ್ಮೆ ಬೆಳೆಯಲ್ಲಿ ಹೆಚ್ಚು ತಾಂತ್ರಿಕತೆ ಬೆಳೆಸಿ ಕೊಂಡರೆ ಉತ್ತಮ ಇಳುವರಿ ಪಡೆದು ಆರ್ಥಿಕತೆಯಲ್ಲಿ ರೇಷ್ಮೆ ಬೆಳೆಗಾರರು ಸದೃಢರಾಗಲು ಸಾಧ್ಯ ಚಿತ್ರದುರ್ಗ ಜಿಲ್ಲಾ ಪಂಚಾಯತ್ ರೇಷ್ಮೆ ಉಪ ನಿರ್ದೇಶಕ ಮಾರಪ್ಪ ಬೀರಲದಿನ್ನಿ
ನಾಯಕನಹಟ್ಟಿ:: ರೈತರು ರೇಷ್ಮೆ ಬೆಳೆಯುವ ಜಮೀನುಗಳಲ್ಲಿ ಕಡ್ಡಾಯವಾಗಿ ಮಣ್ಣು ಮತ್ತು ನೀರನ್ನು ಪರೀಕ್ಷೆ ಮಾಡಿಸಿದರೆ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ರೇಷ್ಮೆ ಉಪ ನಿರ್ದೇಶಕರು ಮಾರಪ್ಪ ಬೀರಲದಿನ್ನಿ ಹೇಳಿದ್ದಾರೆ.
ಮಂಗಳವಾರ ಗ್ರಾಮದ ಎನ್. ಮಹದೇವಪುರ ಗ್ರಾಮದ ರೈತ ಬಿ.ನಾಗರಾಜ್ ರವರ ರೇಷ್ಮೆ ತೋಟದಲ್ಲಿ
ರೇಷ್ಮೆ ಇಲಾಖೆ ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ
ರೇಷ್ಮೆ ಕೃಷಿ ಕ್ಷೇತೋತ್ಸವ ಹಾಗೂ ರೇಷ್ಮೆ ತರಬೇತಿ ಸಂಸ್ಥೆ ತೋಳಹುಣಸೆ ದಾವಣಗೆರೆ ಜಿಲ್ಲೆ ವತಿಯಿಂದ
2024-25 ಸಾಲಿನ ಒಂದು ದಿನದ ಕ್ಷೇತ್ರ ಮಟ್ಟದ ರೇಷ್ಮೆ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ರೇಷ್ಮೆ ಗಿಡದ ಅಂತರ ಹೆಚ್ಚಿಸಿದರೆ ರೇಷ್ಮೆ ಮರಿಗಳನ್ನು ಮೇಯಿಸಿ ಬಹುದಾಗಿದೆ ಸರ್ಕಾರದಿಂದ ರೇಷ್ಮೆ ಬೆಳೆಗಳನ್ನು ಅಭಿವೃದ್ಧಿಗೊಳಿಸಲು ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇನ್ನೂ ಹಿರಿಯ ತಾಂತ್ರಿಕ ಸಹಾಯಕರು ಸಂಶೋಧನಾ ವಿಸ್ತರಣಾ ಕೇಂದ್ರ ಚಿತ್ರದುರ್ಗದ ಜಿ ಪಾಪಯ್ಯ ಮಾತನಾಡಿ ರೇಷ್ಮೆ ತೋಟಗಾರಿಕೆ ನಿರ್ವಹಣೆ ರೇಷ್ಮೆ ಹುಳಕ್ಕೆ ಪೌಷ್ಟಿಕಾಂಶವುಳ್ಳ ಹಿಪ್ಪುನೇರಲೆ ಸೊಪ್ಪು ಅದಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು ಎಂದು ರೈತರಿಗೆ ತಿಳಿಸಿದರು.
ಇದೆ ವೇಳೆ ರೇಷ್ಮೆ ತರಬೇತಿ ಸಂಸ್ಥೆ ತೋಳುಹುಣಸೆ ದಾವಣಗೆರೆ ಎಚ್ ಕೆ ಹರಿಕೃಷ್ಣ ರೇಷ್ಮೆ ಬೆಳೆಗಾರರಿಗೆ ತರಬೇತಿಯನ್ನು ನೀಡಿದರು.
ಇದು ಸಂದರ್ಭದಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ ಬಿ ಉಮಾಪತಿ , ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ತಾಂತ್ರಿಕ ಸೇವಾ ಕೇಂದ್ರ ಪರಶುರಾಂಪುರ ಸೈಯದ್ ಸಲಾದ್ದಿನ್, ರೇಷ್ಮೆ ಸಹಾಯಕ ನಿರ್ದೇಶಕ ಜಿ.ಬಿ. ಮಹೇಶ್, ಕೃಷ್ಣಮೂರ್ತಿ ರೇಷ್ಮೆ ನಿರೀಕ್ಷಕರು ಚಳ್ಳಕೆರೆ ವಿಭಾಗ ಚಳ್ಳಕೆರೆ, ಡಿ. ಟಿ .ಬೋರಯ್ಯ ರೇಷ್ಮೆ ನಿರೀಕ್ಷಕರು ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ, ರೇಷ್ಮೆ ಬೆಳೆಗಾರರು ಪ್ರಗತಿಪರ ರೈತರು ಕಲವೀರಪ್ಪ ಅಬ್ಬೇನಹಳ್ಳಿ, ಕಂಪ್ಯೂಟರ್ ಆಪರೇಟರ್ ತಾಂತ್ರಿಕ ಸೇವಕ ಕೇಂದ್ರ ಚಳ್ಳಕೆರೆ ಎಲ್. ಲಕ್ಷ್ಮಿಬಾಯಿ, ರೇಷ್ಮೆ ಕೃಷಿ ವಿಸ್ತಾರಣ ಕಾರ್ಯಕರ್ತ ತಾಂತ್ರಿಕ ಸೇವಾ ಕೇಂದ್ರ ಚಳ್ಳಕೆರೆ ರವಿ. ರೇಷ್ಮೆ ಬೆಳೆಗಾರರಾದ ಕೆ. ಟಿ. ನರಸಿಂಹರೆಡ್ಡಿ ಬೇಡರೆಡ್ಡಿಹಳ್ಳಿ, ಎನ್ ಮಹದೇವಪುರ ಬಿ ನಾಗರಾಜ್, ಬಿ .ಬೋರಯ್ಯ, ದಾನವೇಂದ್ರಪ್ಪ, ಮಲ್ಲೂರಹಳ್ಳಿ ಎ. ವೆಂಕಟೇಶ್, ಬೇಡರೆಡ್ಡಿಹಳ್ಳಿ ಅಶೋಕ್ ನಾಗೇಶ್ ಡಿ.ಟಿ ನಾಗರಾಜ್. ವೇಣುಗೋಪಾಲ್ ರೆಡ್ಡಿ, ಚಿನ್ನಯ್ಯ, ಎಂ ಬಾಬು, ಸೇರಿದಂತೆ ಉಪಸ್ಥಿತರಿದ್ದರು