ರೈತರಿಗೆ ಕಂಟಕವಾಗಿದ ಕಾಲುವೆಯ ಗಿಡಗಂಟೆಗಳ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು
ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಮಳೆಯ ನೀರು ಕಾಲುವೆಯಿಂದ ಸರಾಗವಾಗಿ ಹರಿಯದೆ ಗ್ರಾಮದ ಒಳಗೆ ಹರಿದ ನೀರಿನಿಂದ ಕೆಲವು ಮನೆಗಳು ಜಲಾವೃತಗೊಂಡಿದ್ದು ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಕಾಲುವೆಯ ಸ್ವಚ್ಛತೆಗೆ ಮುಂದಾಗಿದ್ದಾರೆ.
ಸಾಣಿಕೆರೆ ಗ್ರಾಮ ಪಂಚಾಯಿತಿ ಹಾಗೂ ಪ್ರಕಾಶ್ ಸ್ಪಂಜ್ ಐರನ್ ಕಂಪನಿಯ ಸಹಯೋಗದೊಂದಿಗೆ ಹೆಗ್ಗೆರೆ ಗ್ರಾಮದಲ್ಲಿ ಕಾಲುವೆಯ ನೀರು ಸರಗವಾಗಿ ಹರಿಯದೆ, ರೈತರು ಜಮೀನಿಗೆ ಹೋಗುವ ರಸ್ತೆಯ ಮುಖಾಂತರ ಗ್ರಾಮದೊಳಗೆ ಮಳೆ ನೀರು ಹರಿದ ಪರಿಣಾಮ ಗ್ರಾಮದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು. ಇದನ್ನು ಅಧಿಕಾರಿಗಳಿಗೆ ತಿಳಿಸಿದ ತಕ್ಷಣ ಪ್ರಕಾಶ್ ಸ್ಪಂಜ್ ಕಂಪನಿಯ ವತಿಯಿಂದ ಜೆಸಿಬಿಯನ್ನು ಕರೆಸಿ 300 ಮೀಟರ್ ದೂರದಷ್ಟು ಜಾಲಿ ಗಿಡ ಹಾಗು ಇನ್ನಿತರೆ ತ್ಯಾಜ್ಯ ವಸ್ತುಗಳಿಂದ ಕೂಡಿದ್ದ ಕಾಲುವೆಯನ್ನು ಸ್ವಚ್ಛಗೊಳಿಸಿ ಗ್ರಾಮಕ್ಕೆ ನೀರು ನುಗ್ಗದ ರೀತಿ ಕಾಲುವೆಯ ಮುಖಾಂತರ ನೀರು ಹರಿಯಲು ಅನುಕೂಲ ಮಾಡಲಾಗಿದೆ ಇದರ ಜೊತೆಗೆ ರೈತರು ಜಮೀನುಗಳಿಗೆ ಪ್ರತಿನಿತ್ಯ ಸಂಚರಿಸಲು ರಸ್ತೆ ಬದಿಯಲ್ಲಿ ಆವರಿಸಿದ್ದ ಜಾಲಿ ಗಿಡಗಳನ್ನು ಸಹ ತೆರವುಗೊಳಿಸಲಾಗಿದೆ ಎಂದು ಗ್ರಾಮದ ಯುವ ಮುಖಂಡ ದುರುಗೇಶ್ ತಿಳಿಸಿದ್ದಾರೆ.
ಗ್ರಾಮದ ರೈತನಾದ ಜನಾರ್ಧನ ಮಾತನಾಡಿ ಕಳೆದ ಎರಡು ಮೂರು ವರ್ಷಗಳಿಂದ ಕೃಷಿ ಚಟುವಟಿಕೆಗಳಿಗೆ ತೆರಳಲು ರೈತರಿಗೆ ಮಳೆಗಾಲದಲ್ಲಿ ಅನೇಕ ರೀತಿಯ ತೊಂದರೆ ಆಗುತ್ತಿದ್ದು. ಇದರಿಂದ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದ ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡು ಮನೆಯೊಳಗೆ ನೀರು ಬಂದ ಪರಿಣಾಮದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಜೆಸಿಬಿ ಮುಖಾಂತರ ಕಾಲುವೆಯನ್ನು ಸ್ವಚ್ಛಗೊಳಿಸಿದ್ದಾರೆ. ಇದರಿಂದ ರೈತರು ನಿತ್ಯ ತಮ್ಮ ಜಮೀನುಗಳಿಗೆ ತೆರಳು ಕಾಲುವೆ ನೀರು ಗ್ರಾಮಗಳಿಗೆ ನುಗ್ಗದ ರೀತಿ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಸ್ ಆರ್ ಕೆಂಚಪ್ಪ ಮಾತನಾಡಿ ನಮ್ಮ ಗ್ರಾಮಕ್ಕೆ ಪ್ರಕಾಶ್ ಸ್ಪಂಜ್ ಐರನ್ ಕಂಪನಿ ವತಿಯಿಂದ ಅನೇಕ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತಾ ಬಂದಿದ್ದಾರೆ ಅದರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಕೊಠಡಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸೂಸಜ್ಜಿತವಾದ ಅಂಗನವಾಡಿ ಕೇಂದ್ರ ಹಾಗೂ ಉಚಿತ ಆರೋಗ್ಯ ತಪಾಸಣೆ ರೈತರ ಜಮೀನುಗಳಿಗೆ ತೆರಳಲು ಕಾಲುವೆಯ ಸ್ವಚ್ಛತೆಯನ್ನು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೈಜೋಡಿಸಿ ಅನುಕೂಲ ಮಾಡಿಕೊಡುತ್ತಿದೆ ಎಂದು ತಿಳಿಸಿದರು.
ಈ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲೋಕೇಶ್ ರಂಗಸ್ವಾಮಿ, ಮಂಜುನಾಥ್, ಹನುಮಂತರಾಯ, ನವೀನ್ ಇದ್ದರು.