ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯೂ ಆದರ್ಶಪ್ರಾಯರಾಗಿ ತಾವು ತೆಗೆದುಕೊಳ್ಳುವ ಸಂಬಳಕ್ಕೆ ಪೂರಕವಾಗಿ ಪ್ರಾಮಾಣಿಕ ಸೇವೆ ನಿರ್ವಹಿಸಿದಾಗ ಮಾತ್ರ ಶ್ರೇಯಸ್ಸು ಸಿಗುತ್ತದೆ ಎಂದು ತಹಸೀಲ್ದಾರ್ ರೇಹಾನ್ ಪಾಷ ಕಿವಿ ಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಗ್ರಾಮಾಡಳಿನ ನೌಕರರ ಸಂಘ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತಮಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಹೊಸ ಯೋಜನೆಯಾಗಿ ಬೆಳೆ ಪರಿಹಾರವನ್ನು ನೇತವಾಗಿ ಅರ್ಹ ರೈತರ ಖಾತೆಗೆ ಜಮೆಯಾಗುವಂತೆ ಪ್ರಯೋಗಿಕವಾಗಿ ಕಂದಾಯ ಸಚಿವರು ಜಾರಿಗೊಳಿಸಿದ್ದರು ನಿಗಧಿತ ಅವಧಿಯೊಳಗೆ ಕಚೇರಿ ಸಿಬ್ಬಂದಿ ಹಾಗೂ ತಾಲೂಕಿನ ಎಲ್ಲಾ ಗ್ರಾಮಾಡಳಿತ ಅಧಿಕಾರಿಗಳು,
ಕಂದಾಯ ನಿರೀಕ್ಷಕರು ನಿಗಧಿತ ಅವಧಿಯೊಳಗೆ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪ್ರಯೋಗಿಕ ಬೆಳೆ ಪರಿಹಾರ ಯೋಜನೆ ಯಶ್ವಿಗೊಳಿಸಿದ್ದರಿಂದ ಕಂದಾಯ ಸಚಿವರು 2024ರ ಅತ್ಯುತ್ತ ಕಂದಾಯ ಅಧಿಕಾರಿ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ ಈ ಪ್ರಶಸ್ತಿ ಕಂದಾಯ ಇಲಾಖೆಯ ಪ್ರತಿಯೊಬ್ಬರ ಶ್ರಮದ ಫಲವಾಗಿದೆ ಎಂದು ಕಚೇರಿ ಸಿಬ್ಬಂದಿ. ಕಂದಾಯ ನಿರೀಕ್ಷಕ ಹಾಗೂ ಗ್ರಾಮಾಡಳಿತ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಶಿರಸ್ತೆದಾರ್ ಸದಾಶಿವಪ್ಪ.ಗ್ರಾಮಲೆಕ್ಕಾಧಿಕಾರಿಗಳು ಮಾತನಾಡಿದರು.
ಸರ್ವೆ ಇಲಾಖೆ ಬಾಬುರೆಡ್ಡಿ. ಪಿಂಚಣಿ ಶಿರಸ್ತೆದಾರ್ ಗಿರೀಶ್. ಚುನಾವಣೆ ಶಾಖೆ ಶಿರಸ್ತೆದಾರ್ ಇತರರಿದ್ದರು.