ಎನ್ ದೇವರಹಳ್ಳಿ ಗ್ರಾ.ಪಂ. ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ.
ನಾಯಕನಹಟ್ಟಿ:: ಎನ್.ದೇವರಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರೈಸಬೇಕು ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.
ಅವರು ಸೋಮವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮದಲ್ಲಿ ಗ್ರಾ.ಪಂ. ಆವರಣದಲ್ಲಿ ರಾಜ್ಯ ಸರ್ಕಾರದ ಹೊಸ ಗ್ರಾಮ ಪಂಚಾಯತಿ ಕಟ್ಟಡಗಳ ಅನುದಾನದ ಅಡಿಯಲ್ಲಿ ಬಂದಂತ ₹10. ಲಕ್ಷ ವೆಚ್ಚದ ಗ್ರಾಮ ಪಂಚಾಯತಿ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಆರ್ಥಿಕವಾಗಿ ಹಿಂದುಳಿದ ಗ್ರಾಮಗಳ ಗ್ರಾಮ ಪಂಚಾಯತಿಯಾಗಿದೆ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಜೊತೆಗೂಡಿ ಒಮ್ಮತದಿಂದ ಪಂಚಾಯತಿಯನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಆದ್ದರಿಂದ ನೂತನ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೇರಲಗುಂಟೆ ಸೂರನಾಯಕ, ಭೀಮನಕೆರೆ ಪಾಲಯ್ಯ ,ವಕೀಲ ಉಮಾಪತಿ. ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್. ರವಿಕುಮಾರ್, ವರವು ಶಂಕರ್ ಮೂರ್ತಿ, ಜಿ.ಬಿ. ಮುದಿಯಪ್ಪ, ಎನ್ ದೇವರಹಳ್ಳಿ ಎಚ್ ನಾಗರಾಜ್, ಟಿ ರಾಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಿತಾ ರಾಜನಾಯ್ಕ, ಸದಸ್ಯರಾದ ಎಸ್ ಸಿದ್ದಪ್ಪ, ಆರ್ ಬಸವರಾಜ್, ವರವು ಟಿ.ಕಾಟಯ್ಯ, ಡಾ. ಪಿ ಕಾಟಂಲಿಂಗಯ್ಯ, ಅಕ್ಕಮ್ಮ ರಾಜಣ್ಣ, ಎಲ್ ಕೃಷ್ಣವೇಣಿ ರಾಜು, ಗುರುಮೂರ್ತಿ, ಪಿಡಿಒ ಕೆ.ಓ. ಶಶಿಕಲಾ, ಸಂತೋಷ್, ಪಿಎಸ್ಐ ದೇವರಾಜ್, ಎಎಸ್ಐ ದಾದಾಪೀರ್, ಭಾಷಾ, ಅಣ್ಣಪ್ಪ, ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಇದ್ದರು.