ರಾಮಸಾಗರ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ರೈತರ ಜಮೀನಿನಲ್ಲಿ ನೀರು ನುಗ್ಗಿ ಈರುಳ್ಳಿ .ಮೆಕ್ಕೆಜೋಳ. ಬೆಳೆ ಹಾನಿ.
ನಾಯಕನಹಟ್ಟಿ:; ಅ.4. ಬಯಲು ಸೀಮೆಯಲ್ಲಿ ಬಿಸಿಲಿನ ತಾಪಕ್ಕೆ ಹೈರಾಣದ ಜನತೆಗೆ ಮಳೆರಾಯ ಕರುಣೆ ತೋರಿ ಮಳೆ ಸುರಿಸಿದ್ದಾನೆ ತಡರಾತ್ರಿ ಸುರಿದ ಭಾರಿ ಮಳೆಯಿಂದ ಹೋಬಳಿಯ ರಾಮಸಾಗರ ಗ್ರಾಮದ ರೈತರಾದ ಗುಂಡಮ್ಮ, ತಿಪ್ಪೇಸ್ವಾಮಿ, ಕಾಮಕ್ಕ, ತಿಪ್ಪೇಸ್ವಾಮಿ, ಕಾಮಯ್ಯ, ಪಾಲಯ್ಯ, ಓಬಮ್ಮ, ಪಾಲಯ್ಯ, ಓಬಮ್ಮ, ಮತ್ತು ಗಜ್ಜುಗಾಹಳ್ಳಿ ರೈತ ಜಿ.ಬೋರಯ್ಯ, ರವರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ.
ಇದೇ ವೇಳೆ ಗ್ರಾಮದ ರೈತ ತಿಪ್ಪೇಸ್ವಾಮಿ ಮಾತನಾಡಿ ರಾಮಸಾಗರ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿ ಈರುಳ್ಳಿ ಮೆಕ್ಕೆಜೋಳ ಸೇರಿದಂತೆ ಸಂಪೂರ್ಣವಾಗಿ ನೆಲಕಚ್ಚಿದೆ ಅಪಾರ ಬೆಳೆ ನಷ್ಟ ಆಗಿದೆ ಕೂಡಲೇ ಸರ್ಕಾರ ರೈತರಿಗೆ ಪರಿಹಾರವನ್ನು ನೀಡುವಂತೆ ಮನವಿಯನ್ನು ಮಾಡಿದರು.
ಇನ್ನೂ ಗ್ರಾಮ ಲೆಕ್ಕಾಧಿಕಾರಿ ಶಂಕರ್ ಮಾತನಾಡಿದರು ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮಳೆಗೆ ಸುಮಾರು 10 ಎಕರೆ 5. ಗುಂಟೆ ಈರುಳ್ಳಿ .2.ಎಕರೆ 10 ಗುಂಟೆ ಮೆಕ್ಕೆಜೋಳ ಸಂಪೂರ್ಣವಾಗಿ ಬೆಳೆ ನಷ್ಟವಾಗಿದೆ ರೈತರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಸರ್ಕಾರದಿಂದ ರೈತರಿಗೆ ಪರಿಹಾರ ವ್ಯವಸ್ಥೆಯನ್ನು. ಕಲ್ಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರೈತರಾದ ಕಾಮಯ್ಯ, ತಿಪ್ಪೇಸ್ವಾಮಿ, ಓಬಮ್ಮ, ಜಯಣ್ಣ,ಗಜ್ಜುನಹಳ್ಳಿ ಜಿ. ಬೋರಯ್ಯ, ಗ್ರಾಮ ಸಹಾಯಕ ತಿಪ್ಪೇಶ್ ಇದ್ದರು.