filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಮೊಳಕಾಲ್ಮೂರು ಕ್ಷೇತ್ರದ ಶಾಸಕರ ವಿರುದ್ಧ ಸ್ಪೋಟಕ ಹೇಳಿಕೆ ಸಿಡಿಸಿದ ಮಾಜಿ ಶಾಸಕ ಎಸ್‌‌.ತಿಪ್ಪೇಸ್ವಾಮಿ

ಅಕ್ರಮ ಭೂ ಕಬಳಿಕೆ, ಕಮಿಷನ್ ದಂಧೆ ಆರೋಪ

ಚಳ್ಳಕೆರೆ : ಮೊಳಕಾಲ್ಮೂರು
ಕ್ಷೇತ್ರದಲ್ಲಿ ‌ಮರಳು ಮಾಫಿಯಾ, ಭೂ ಕಬಳಿಕೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಕೇವಲ ಶಾಸಕರ ಆಪ್ತರಿಗೆ, ಟೆಂಡರ್ ದಾರರ ಜೊತೆ ಸೆರಿಕೊಂಡು ಹಣ ಮಾಡುವ ಉದ್ದೇಶದಿಂದ ಮಾತ್ರ ಶಾಸಕರಾಗಿದ್ದಾರೆ ಹೊರತು ಕ್ಷೇತ್ರದ ಜನರ ಸ್ಫಂಧನೆಗೆ ಅಲ್ಲ ಎಂದು ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಜನರು ಗುಳೆ ಹೋಗುವಂತಹ ಪರಿಸ್ಥಿತಿ ಇದೆ, ಆದರೆ ರಾಜ್ಯ ಸರಕಾರ ಮಾತ್ರ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿಸಿ ಪರಿಹಾರ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ಇನ್ನೂ ಗ್ಯಾರಂಟಿ ಯೋಜನೆಗಳ‌ ಪೂರ್ವದಲ್ಲಿ ಅನುದಾನ ಹೊದಗಿಸುತ್ತೆವೆ ರಾಜ್ಯದ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದೆವೆ ಎನ್ನುವ ಇವರುಗಳು, ಇವರೆಗೆ ಕ್ಷೇತ್ರದಲ್ಲಿ ಯಾವುದೇ ಜನಪರ ಯೋಜನೆಗಳ ಕಾರ್ಯಕ್ರಮ ಮಾಡಿಲ್ಲ,

ಕೂಡ್ಲಿಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ವರ್ಗವಾಣೆ ಮಾಡಿಸಿಕೊಳ್ಳುವುದು ಹೇಕೆ, ಇದರ ಹಿಂದಿನ ಉದ್ದೇಶವಾದರೂ ಏನು, ಕ್ಷೇತ್ರದ ವ್ಯಾಪ್ತಿಯಲ್ಲಿ ಮರಳು ದಂಧೆ ಹೇರಳವಾಗಿ ನಡೆಯುತ್ತಿದೆ, ಇನ್ನೂ ಭೂಮಿಯನ್ನು ಅಕ್ರಮವಾಗಿ ಕಬಳಿಸಿದವರ ಬಗ್ಗೆ ಇದುವರೆಗೆ ಕ್ರಮ ಜರುಗಿಸಿಲ್ಲ ತಹಶಿಲ್ದಾರ್ ಹಾಗೂ ಮೇಲಿನ‌ ಅಧಿಕಾರಿಗಳು ಕೂಡ ಇವರ ಕಪಿ‌ ಮುಷ್ಠಿಯಲ್ಲಿ ಇದ್ದಾರೆಯೇ ಎಂಬುದು ಅನುಮಾನ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇದಕ್ಕೆ ನಮ್ಮ ಚಳ್ಳಕೆರೆ ಟಿವಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ದಾರಿಯಲ್ಲಿ ಹೋಗುವವರೆಗೆಲ್ಲ ಉತ್ತರಿಸಲು ನಮ್ಮಲ್ಲಿ ಸಮಯವಿಲ್ಲ, ಕಳೆದ ಇಪ್ಪತೈದು ವರ್ಷಗಳಿಂದ ಕ್ಷೇತ್ರದ ಜನರ ಮನಸ್ಸಿನಲ್ಲಿ ಇದ್ದೆನೆ, ದಂಧೆ ಮಾಡುವ ಅಗತ್ಯ ನನಗಿಲ್ಲ ಸೋಲಿನ ಅತಾಷೆಯಲ್ಲಿ ಈತರ ಹೇಳಿಕೆ ಕೊಡುತ್ತಾರೆ , ಕಳೆದ ಬಾರಿ ಮಾಜಿ ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದಾಗ ಇವರ ಧ್ವನಿ ಎಲ್ಲಿ ಹೋಗಿತ್ತು, ಅಜ್ಞಾನಿಗಳ ಹೇಳಿಕೆಗೆ ನಾವು ಉತ್ತರಿಸುವುದಿಲ್ಲ, ನಮ್ಮ ಅಭಿವೃದ್ಧಿ ಕ್ಷೇತ್ರದ ಜನತೆಗೆ ಗೊತ್ತು ಹಾದಿಲಿ ಬೀದಿಲಿ ಕಂಡ ಕಂಡಲ್ಲಿ ಹೇಳಿಕೆ ಕೋಡುವವರ ಮಾತಿಗೆ ನಾನು ಉತ್ತರಿಸುವುದಿಲ್ಲ ಎಂದಿದ್ದಾರೆ.

About The Author

Namma Challakere Local News
error: Content is protected !!