ನಾಯಕನಹಟ್ಟಿ : ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದಿಂದ ನಾಯಕನಹಟ್ಟಿ ಪಟ್ಟಣದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಸೇತುವೆ ಕಾಮಗಾರಿ ಕಳೆಪೆ ಕಾಮಗಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಪಿ.ಮುತ್ತಯ್ಯ ಜಾಗನೂರಹಟ್ಟಿ ಆರೋಪಿಸಿದರು.
ನಂತರ ಮಾತನಾಡಿದ ಅವರು ರಾಜ್ಯ ಹೆದ್ದಾರಿ 45 ರ ಈ ಗ್ರಾಮದ ಮೂಲಕ ಹಾದು ಹೋಗಿರುತ್ತದೆ. ದಿನ ಬೆಳಗಾದರೆ ಸಾವಿರಾರು ವಾಹನಗಳು ಚಳ್ಳಕೆರೆ, ಬೆಂಗಳೂರು, ಪಾವಗಡ, ಪಕ್ಕದ ರಾಜ್ಯವಾದ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುತ್ತದೆ.

ಸೇತುವೆ ಕಾಮಗಾರಿ ಮಾಡಿ ಒಂದು ವರ್ಷಗಳಾಗಿಲ್ಲ, ಆದರೆ ನೀರು ಹರಿಯುವ ಸ್ಥಳ ಬಿಟ್ಟು ಬೇರೆ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ಜಾಗದಲ್ಲಿ ಮೇಲ್ ಸೇತುವೆ ನಿರ್ಮಾಣ ಮಾಡಬೇಕಿತ್ತು. ಆದರೆ ಗುತ್ತಿಗೆದಾರರು ನಾಮಕವಾಸ್ತ ಸೇತುವೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಕೆಲ ದಿನಗಳ ಹಿಂದೆ ಮನುಮೈನಹಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದು ರಸ್ತೆ ಮೇಲೆಲ್ಲಾ ನೀರು ಹರಿವ ರಭಸಕ್ಕೆ ವಾಹನಗಳು ನೇರಲಗುಂಟೆ, ಎನ್ ದೇವರಹಳ್ಳಿ ಮಾರ್ಗವಾಗಿ ನಾಯಕನಹಟ್ಟಿ ಪಟ್ಟಣಕ್ಕೆ ಸಂಚರಿಸಿದ್ದವು . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲವೆಂದು ಆರೋಪಿಸಿದರು.

ಎನ್ ಮಹದೇವಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಈ ಕಾಮಗಾರಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಕೂಡ ಇದೆ. ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ, ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಸ್ವಲ್ಪ ಗಿಡ ಗಂಟೆಗಳನ್ನು ತೆರೆವುಗೊಳಿಸಿ ಹೋದವರು ಇತ್ತ ಕಡೆ ತಿರುಗಿ ನೋಡಿಲ್ಲ.
ಕೊಡಿ ಬಿದ್ದ ಸಂದರ್ಭದಲ್ಲಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಎನ್ ಮಹದೇವಪುರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ತಿಪ್ಪೇಸ್ವಾಮಿ, ಲೋಕ್ಯ ನಾಯ್ಕ್, ಕರವೇ ಕನ್ನಡ ಸೇನೆ ಹೋಬಳಿ ಉಪಾಧ್ಯಕ್ಷ ರಾಘವೇಂದ್ರ, ರಾಜ್ಯ ರೈತ ಸಂಘ ಹಸಿರು ಸೇನೆಯ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಜೋಗಿಹಟ್ಟಿ ಮಂಜು, ಇನ್ನೂ ಮುಂತಾದವರು ಹಾಜರಿದ್ದರು.

Namma Challakere Local News
error: Content is protected !!