ಚಳ್ಳಕೆರೆ :
ಬಯಲು ಸೀಮೆಯ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ರೈತರ ಖಾತೆಗೆ ಬೆಳೆ ಪರಿಹಾರದ ಹಣವನ್ನು ಜಮೆ ಮಾಡಿಸಿದ ಕಿರ್ತಿಗೆ ಹಾಗೂ ಆಡಳಿತ ವೈಖರಿಗೆ ಈ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ2024 ಪ್ರಶಸ್ತಿ ಗೆ ಭಾಜನರಾದ ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ರೇಹಾನ್ ಪಾಷರವರಿಗೆ ಚಳ್ಳಕೆರೆ ತಾಲೂಕು ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.
ನಗರದ ತಾಲೂಕು ಕಛೇರಿಯಲ್ಲಿ ತಹಶಿಲ್ದಾರ್ ರೇಹಾನ್ ಪಾಷಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸುವ ಮೂಲಕ ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿ ತಾಲೂಕಿನ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕು , ಎಂದು ಶುಭಾಷಯ ಕೋರಿದ್ದಾರೆ.
ಇದೇ ಸಂಧರ್ಭದಲ್ಲಿ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಯಾದಲಗಟ್ಟೆ ಜಗನ್ನಾಥ್, ಪಿ.ದ್ಯಾಮಯ್ಯ ಮೈತ್ರಿ, ದೊಡ್ಮನೆ ರಾಮಾಂಜನೇಯ, ಬೆಳೆಗೆರೆ ಸುರೇಶ್, ರಘುನಾಥ್, ಮೌನಿಶ್ ಆಚಾರ್, ಸಮಾಜ ಕಲ್ಯಾಣ ಅಧಿಕಾರಿ ಶಿವರಾಜ್ ಇತರರು ಇದ್ದರು..