ಮಡಿಲು ಸಂಸ್ಥೆ ವತಿಯಿಂದ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಸ್ವಚ್ಛ ಭಾರತ ಕನಸ್ಸು ಕಂಡ ಗಾಂಧೀಜಿಯವರ ಕನಸ್ಸು ನನಸಾಗಿಸೋಣ: ಯುವ ಪತ್ರಕರ್ತ ಗಿರೀಶ್

ಚಿತ್ರದುರ್ಗ: ಸ್ವಚ್ಛ ಭಾರತ ನಿರ್ಮಾಣದ ಕನಸ್ಸು ಕಂಡ ಗಾಂಧೀಜಿಯವರ ಕನಸ್ಸುನ್ನ ನಾವೆಲ್ಲರೂ ಸೇರಿ ನನಸ್ಸುಗೊಳಿಸಬೇಕಾಗಿದೆ. ಇದರಿಂದ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಪತ್ರಕರ್ತರದ ಗಿರೀಶ್ ಹೇಳಿದರು.

ನಗರದ ಸರಸ್ವತಿಪುರಂ ಪಾರ್ಕಿನಲ್ಲಿ ನೆಹರು ಯುವ ಕೇಂದ್ರದ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ದೇಶಾದ್ಯಂತ ಸಾರ್ವಜನಿಕ ಆಸ್ತಿಗಳು, ರಸ್ತೆಗಳು ಮತ್ತು ಸಮಾಜವನ್ನು ಸ್ವಚ್ಛವಾಗಿಡುವುದು ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದೆ ಸ್ವಚ್ಛತೆಯನ್ನು ಕಾಪಾಡುವುದರಿಂದ ಕೊಳಚೆಯಿಂದ ಹರಡುವ ಹಲವಾರು ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಕಸಮುಕ್ತ ಮಾಡಿ ಸ್ವಚ್ಛತೆಯನ್ನು ಕಾಪಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು

ಸ್ವಚ್ಛತಾ ಸೇವ ಕಾರ್ಯಕ್ರಮಕ್ಕೆ ಭಾಗವಹಿಸಿದ ಉಪನ್ಯಾಸಕ ಲಕ್ಷ್ಮಿಕಾಂತ್ ಮಾತನಾಡಿ ಸರಸ್ವತಿಪುರಂ ಪಾರ್ಕಿನಲ್ಲಿ ದಿನನಿತ್ಯ ಸಾರ್ವಜನಿಕರು ವಾಯು ವ್ಯವಹಾರ ಮಾಡುವ ಸ್ಥಳವಾಗಿದೆ ಆದರೆ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಮಡಿಲು ಸಂಸ್ಥೆಯ ಸಹಯೋಗದೊಂದಿಗೆ ಪಾರ್ಕಿನಲ್ಲಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸ್ವಚ್ಛತೆಗೊಳಿಸಿ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿ ನೈರ್ಮಲ್ಯವನ್ನುಂಟು ಮಾಡದೆ ಸ್ವಚ್ಛತೆಯನ್ನು ಕಾಪಾಡಿ ಗಾಂಧೀಜಿಯವರು ಕಂಡ ಕನಸಿನ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರು ಸಹಕರಿಸಿ ಎಂದು ಹೇಳಿದರು.

ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಮಾತಾನಾಡಿ ನೈರ್ಮಲ್ಯವು ಆನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಆರೋಗ್ಯದ ಸಮಸ್ಯೆಯು ದೇಶದ ಜನರನ್ನು ಆಶಕ್ತರನ್ನಾಗಿ ಮಾಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವಸ್ತುಗಳನ್ನ ಎಲ್ಲೆಂದರಲ್ಲಿ ಬಿಸಾಕದಂತೆ ಸ್ವಚ್ಛ ಪರಿಸರ ನಿರ್ಮಿಸಿಕೊಳ್ಳಬೇಕು. ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿದ್ದಲ್ಲಿ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಬಹುದು ಪ್ರತಿಯೊಬ್ಬರು ಸ್ವಚ್ಛ ಭಾರತ ನಿರ್ಮಾಣದಲ್ಲಿ ಭಾಗಿಯಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ತಿಳಿಸಿದರು.

ಮಡಿಲು ಸಂಸ್ಥೆಯ ಖಜಾಂಚಿ ಪ್ರದೀಪ್.ಎಸ್.ಸಿ ಮಾತನಾಡಿ ನಾವು ವಾಸಿಸುವ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ, ನಗರ ಪ್ರದೇಶಗಳ ಸ್ವಚ್ಛತೆಗೆ ಕಾರಣೀಕೃತರಾದ ಪೌರಕಾರ್ಮಿಕರ ಕಾರ್ಯ ತುಂಬಾ ಶ್ಲಾಘನೀಯವಾದದ್ದು, ಪ್ರತಿಯೊಂದು ಕೆಲಸಕ್ಕೂ ತನ್ನದೆಯಾದ ಗೌರವವಿದೆ. ಇದರಿಂದ ಪ್ರತಿಯೊಬ್ಬರು ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯಯುತ ಜೀವನವನ್ನು ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ಭಾಗವಹಿಸಿದ ಸ್ವಯಂ ಸೇವಕರಿಗೆ ನೆಹರು ಯುವ ಕೇಂದ್ರ ಇಲಾಖೆ ಹಾಗೂ ಮಡಿಲು ಸಂಸ್ಥೆ ವತಿಯಿಂದ ಟೀ ಶರ್ಟ್, ಕ್ಯಾಪ್, ನೋಟ್ ಬುಕ್, ಮತ್ತು ಪೆನ್ ಗಳನ್ನು ವಿತರಿಸಲಾಯಿತ್ತು.

ಈ ಒಂದು ಸಂದರ್ಭದಲ್ಲಿ ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್.ಡಿ ಆಲಘಟ್ಟ, ಸಂಘಟನಾ ಕಾರ್ಯದರ್ಶಿ ದರ್ಶನ್, ನಿರ್ದೇಶಕರಾದ ದ್ಯಾಮ್ ಕುಮಾರ್, ಪ್ರವೀಣ್, ವಿದ್ಯಾರ್ಥಿಗಳಾದ ಭರತ್, ಅಭಿ, ಪ್ರಭು, ರಘು, ದಿಲೀಪ್, ರುದ್ರ, ಬೊಮ್ಮಲಿಂಗಯ್ಯ, ಬಾಬು, ಮಂಜುನಾಥ್ ಸೇರಿದಂತೆ ಇತ್ತರರು ಇದ್ದರು.

About The Author

Namma Challakere Local News
error: Content is protected !!