ಚಳ್ಳಕೆರೆ : ಕೇವಲ 4 ತಿಂಗಳಲ್ಲೇ ಅಚ್ಚರಿ ಹುಟ್ಟಿಸುವ ಜ್ಞಾಪಕ ಶಕ್ತಿ ಹೊಂದಿದ್ದು, ಈಗ ನೋಬಲ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದೆ.
ಹೌದು ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯ ಕಾಮಸಮುದ್ರ ಗ್ರಾಮದ ನಿವಾಸಿಗಳಾದ ಸಿದ್ದೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ಮಗು ಯಶ್ವಿಕ್ ಅಜು9ನ್ ಆರ್.ನಾಲ್ಕು ತಿಂಗಳು ಹತ್ತು ದಿನಗಳಲ್ಲಿ ಈ ರೀತಿಯ ದಾಖಲೆ ಬರೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಕ್ಷಿಗಳು,ಕಲರ್, ಅಕ್ಷರ ,ಹಣ್ಣುಗಳು, ತರಕಾರಿಗಳು, ಬಣ್ಣಗಳು, ವರ್ಣಮಾಲೆಗಳು ಮತ್ತು ಆಕಾರಗಳು, ಸಂಖ್ಯೆಗಳು ಸೇರಿದಂತೆ ಇನ್ನಿತರೆ 216 ಫ್ಲ್ಯಾಷ್ ಕಾರ್ಡ್ಗಳನ್ನು ಗುರುತಿಸುವ ಸಾಮರ್ಥ್ಯದಿಂದಾಗಿ ಮಗು ಅಂತಹ ಚಿಕ್ಕ ವಯಸ್ಸಿನಲ್ಲಿ ಫ್ಲ್ಯಾಷ್ ಕಾರ್ಡ್ಗಳನ್ನು ಗುರುತಿಸುವ ಅಸಾಮಾನ್ಯ ಸಾಮರ್ಥ್ಯಕ್ಕಾಗಿ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ಬರೆದಿದೆ.
ಮಗುವಿನ ಕುಟುಂಬವು ಮಗುವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿ ನೋಬಲ್ ವರ್ಲ್ಡ್ ರೆಕಾರ್ಡ್ಗೆ ಕಳುಹಿಸಿದರು. ನೋಬಲ್ ವರ್ಲ್ಡ್ ರೆಕಾರ್ಡ್ಸ್ ತಂಡವು ಪರಿಶೀಲಿಸಿತು ಮತ್ತು ಮಗುವಿನ ವಿಶೇಷ ಪ್ರತಿಭೆಯನ್ನು ಪರೀಕ್ಷಿಸಿತು. ಬಳಿಕ ವಿಶೇಷ ಪ್ರಮಾಣಪತ್ರವನ್ನು ನೀಡಿದ್ದಾರೆ, ಕೇವಲ ನಾಲ್ಕು ತಿಂಗಳ ಎಳೆಯ ವಯಸ್ಸಿನಲ್ಲೇ ವಿಶ್ವದಾಖಲೆಯನ್ನು ಈ ಮಗು ಬರೆದಿರುವುದು ಪೋಷಕರಿಗೆ ಇನ್ನಿಲ್ಲದ ಸಂತಸ ತಂದಿದೆ.
ಮಗುವಿನ ಸಾಧನೆಗೆ ಚಳ್ಳಕೆರೆ ತಾಲ್ಲೂಕಿನ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಸರ್ಟಿಫಿಕೇಟ್ ನೀಡಿ ಸನ್ಮಾನಿಸಿದರು. ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.