ಚಳ್ಳಕೆರೆ :
ಈರುಳ್ಳಿ ಖರೀದಿಗೆ ರೈತರ ಜಮೀನಿಗೆ ಲಗ್ಗೆ ಹಿಡುತಿರುವ
ವರ್ತಕರು
ಚಳ್ಳಕೆರೆ ತಾಲ್ಲೂಕಿನ ಈರುಳ್ಳಿ ಬೆಳೆಗಾರರು ತಮ್ಮ ಫಸಲನ್ನು ಮನೆ
ಬಾಗಿಲಲ್ಲೇ ಮಾರಾಟ ಮಾಡುತ್ತಿದ್ದಾರೆ.
ಕಸಬಾ ಹೋಬಳಿಯಲ್ಲಿ
ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಬೆಲೆ ಹೆಚ್ಚಳವಾಗಿರುವ
ಪರಿಣಾಮ, ವರ್ತಕರು, ದಲ್ಲಾಳಿಗಳು ರೈತರ ಜಮೀನು, ಹಾಗೂ
ಮನೆಗಳಿಗೆ ತೆರಳಿ ಖರೀದಿ ಮಾಡುತ್ತಿದ್ದಾರೆ.
ಈ ಬಾರಿ ಈರುಳ್ಳಿಗೆ
ಆರಂಭಿಕ ಹಂತದಲ್ಲಿ ನಿರಂತರ ಸೋನೆ ಮಳೆ ಎದುರಾಯಿತು.
ತೇವಾಂಶ ಅಧಿಕವಾದ ಪರಿಣಾಮ ಕೊಳೆರೋಗ ಆವರಿಸಿ,
ನಿರೀಕ್ಷಿತ ಫಸಲು ಸಿಗಲಿಲ್ಲ. ಅಳಿದುಳಿದ ಫಸಲು ಈಗ ರೈತರ
ಕೈಹಿಡಿದಿದೆ ಎನ್ನಲಾಗಿದೆ.