ಪ್ರತಿಯೊಬ್ಬರೂ ಸ್ವಚ್ಚತಗೆ ಮೊದಲು ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾ. ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ.

ನಾಯಕನಹಟ್ಟಿ:: ಸೆ. 25 .
ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾ. ಪಂ ಸದ್ಯಸ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ ಹೇಳಿದ್ದಾರೆ.

ಬುಧವಾರ ಹೋಬಳಿಯ ನಲಗೇತನಹಟ್ಟಿ ಗ್ರಾ.ಪಂ. ವ್ಯಾಪ್ತಿಯ ರಾಮದುರ್ಗ ಗ್ರಾಮದ ಹೊಸಗುಡ್ಡ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಚಿತ್ರದುರ್ಗ ನಲಗೇತನಹಟ್ಟಿ ಗ್ರಾ. ಪಂ . ವತಿಯಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ- 2024 ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಭಾರತ ದೇಶವನ್ನು ಮಹಾತ್ಮ ಗಾಂಧೀಜಿ ಕಂಡಂತ ಕನಸಿನಂತೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಆಸೆಯಂತೆ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಎಂಬ ಮಹತ್ವದ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಐತಿಹಾಸಿಕ ಸ್ಥಳಗಳಾದ ಹೊಸ ಗುಡ್ಡ ಹಿರೇಕೆರೆ ಚಿಕ್ಕಕೆರೆ ಸ್ಥಳಗಳಿಗೆ ಪ್ರವಾಸೋದ್ಯಮ ಮತ್ತು ಪುರತತ್ವ ಇಲಾಖೆ ಕೈಜೋಡಿಸಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹ ನಿರ್ದೇಶಕ ಬಿ.ಹೆಚ್. ಶಶಿಕುಮಾರ್, ಇಲಾಖೆ ಗ್ರಾ.ಪಂ. ಸದಸ್ಯರಾದ ಬಂಗಾರಪ್ಪ ,ಕೆ ಬಿ ಬೋಸಯ್ಯ,ದ್ರಾಕ್ಷಿಯಣಿ ಚಿಂದನಂದ್, ಜಿಲ್ಲಾ ಪಂಚಾಯತ್ ಜಿಲ್ಲಾ ಐಇಸಿ ಸಮಾಲೋಚಕ ಬಿಸಿ ನಾಗರಾಜ್, ಪಿಡಿಒ ರಾಜಣ್ಣ, ಗೃಹರಕ್ಷಕ ದಳ ಘಟಕಾಧಿಕಾರಿ ವೈ ಬಿ ತಿಪ್ಪೇಸ್ವಾಮಿ ನಾಯಕನಹಟ್ಟಿ, ನಲಗೇತನಹಟ್ಟಿ ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಆಶಾ ಕಾರ್ಯಕರ್ತ ಅನ್ನಪೂರ್ಣಮ್ಮ, ಅಂಗನವಾಡಿ ಶಿಕ್ಷಕಿರಾದ ಬೋರಮ್ಮ,ಈ ಎಸ್ ರಮ್ಯಾ, ಸುಧಾ ,ಮಲ್ಲಮ್ಮ, ಲಕ್ಕಮ್ಮ, ಹಾಗೂ ಎಂಬಿಕೆ ಗಾಯಿತ್ರಿ ಎತ್ತಿನಹಟ್ಟಿ ,ಪಶುಸಖಿ ಲಕ್ಷ್ಮಿ,ಕೃಷಿ ಸಖಿ ಭಾಗ್ಯಮ್ಮ, ಕಾಯಕಮಿತ್ರ ಶೈಲಜಾ, ಕೂಸಿನಮನೆ ಸಿಬ್ಬಂದಿ ಹೇಮಾವತಿ, ದುರ್ಗಾಂಬಿಕ, ನಾಗವೇಣಿ, ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಇದ್ದರು.

Namma Challakere Local News
error: Content is protected !!