ಚಳ್ಳಕೆರೆ :
ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟು
ತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.ಸಿ
ತಿಳಿಸಿದರು.
ಅವರು ತಾಲೂಕಿನ ದೊಡ್ಡೆರಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಹಂಗರ್ ಪ್ರಾಜೆಕ್ ಕರ್ನಾಟಕ
ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ತಪಾಸಣಾ ಶಿಬಿರ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಬಹುವಾಗಿ ಕಾಡುವ
ಕಾಯಿಲೆ ಇದಾಗಿದೆ.
ಹಿಮೋಗ್ಲೋಬಿನ್ ಅಂಶದ ಕೊರತೆ ಬಾಲಕಿಯರಲ್ಲಿ, ಕಿಶೋರಿಯರು,
ಗರ್ಭಧಾರಿತ ಮಹಿಳೆಯರನ್ನು ಬಾಧಿಸುತ್ತದೆ
ಮಹಿಳೆಯರಲ್ಲಿ ರಕ್ತಹೀನತೆಯನ್ನು ಗುರುತಿಸಿದ ನಂತರ ಐರನ್ ಮತ್ತು ಫೋಲಕ್
ಆ್ಯಸಿಡ್‌ನಂತಹ ಮಾತ್ರೆ, ಟಾನಿಕ್ ನೀಡಿದ ನಂತರ ಕರ್ತವ್ಯ ಮುಗಿಯಿತು
ಎಂದು ಕೊಳ್ಳಬಾರದು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ರಕ್ತಹೀನತೆ
ದುಷ್ಪರಿಣಾಮಗಳ ಕುರಿತು ಸತತವಾಗಿ ಅರಿವು ಮೂಡಿಸಬೇಕಿದೆ.
ಮನೆಮನೆಗೆ ತೆರಳ
ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಸ್ಥಳೀಯವಾಗಿ ಸಿಗಬಹುದಾದ
ಹಸಿರು ತರಕಾರಿಗಳ ಬಳಕೆ, ಆಹಾರ ಪದ್ಧತಿಯಲ್ಲಿನ ಸೂಕ್ತ ಬದಲಾವಣೆ ಕುರಿತು ಮಾಹಿತಿ
ನೀಡಬೇಕು.
ವೃತ್ತಿಪರರಾಗಿ ನಾವು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಅಗತ್ಯತೆ ಹೆಚ್ಚಿದೆ.
ಆಗ ಮಾತ್ರ ರಕ್ತಹೀನತೆಯಂತಹ ತೊಂದರೆಗಳಿಂದ ಮಹಿಳೆಯರು ಪಾರಾಗಲು ಸಾಧ್ಯ
ಎಂದು ಬಿ ಹಂಗರ ಪ್ರಾಜೆಕ್ಟ್ ತಾಲೂಕು ಸಂಯೋಜಕರು ತಿಳಿಸಿದರು.
ಹಾವುಲ್ ಹಮೀದ್
ಸಮುದಾಯ ಆರೋಗ್ಯ ಅಧಿಕಾರಿ, ಅಯುಷ್ಮಾನ್ ಅರೋಗ್ಯ ಮಂದಿರ ದೊಡ್ಡಲಿ ರವರು, ಸೊಪ್ಪ
ತರಕಾರಿಯನ್ನು ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ತಿಳಿಸಿದರು