[9/24, 5:33 PM] ರಾಮುದೊಡ್ಮನೆ ಚಳ್ಳಕೆರೆ👍: ಪಟ್ಟಣದ ಬಡ ಜನರಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್.

ನಾಯಕನಹಟ್ಟಿ::ಸೆ.24. ಪಟ್ಟಣದ 14.08 9ನೇ ವಾರ್ಡಿನ ನಿವಾಸಿಗಳಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಹೇಳಿದ್ದಾರೆ.

ಮಂಗಳವಾರ ಪಟ್ಟಣದ ನಮ್ಮ ಕ್ಲಿನಿಕ್ ಆಸ್ಪತ್ರೆಯಲ್ಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ಹಾಗೂ ತಾಲೂಕು ಹಾರೋಗೆ ಅಧಿಕಾರಿಗಳ ಕಚೇರಿ ಚಳ್ಳಕೆರೆ ನಮ್ಮ ಕ್ಲಿನಿಕ್ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಾಯಕನಹಟ್ಟಿ ವತಿಯಿಂದ ಜನ ಆರೋಗ್ಯ ಸಮಿತಿ ಸಭೆಯಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಪಟ್ಟಣ ಪ್ರದೇಶದ ಬಡ ಜನರಿಗೆ ಮತ್ತು ಗರ್ಭಿಣಿ ಬಾಣಂತಿಯರಿಗೆ ವಯೋ ವೃದ್ಧರು ಉತ್ತಮ ಆರೋಗ್ಯವನ್ನ ಕಾಪಾಡಿಕೊಳ್ಳಲು ನಮ್ಮ ಕ್ಲಿನಿಕ್ ವರದಾನವಾಗಿದ್ದು ಸ್ಥಳೀಯ ನಿವಾಸಿಗಳು ಸದುಪಯೋಗ ಪಡೆದುಕೊಳ್ಳಿ ಎಂದು ಮನವರಿಕೆ ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ಮಾತನಾಡಿ ಬಡ ಜನರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಪಡೆಯಲು ನಮ್ಮ ಕ್ಲಿನಿಕ್, ನಮ್ಮ ವಾರ್ಡಿನಲ್ಲಿ ಇರುವುದರಿಂದ ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಇದರ ಸದುಪಯೋಗವನ್ನು ಪಟ್ಟಣದ 14 8 9 ವಾರ್ಡಿನ ನಿವಾಸಿಗಳು ಪಡೆದುಕೊಳ್ಳಬೇಕೆಂದು ಸೂಚನೆ ನೀಡಿದರು.

ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಬಡ ಜನರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಬಡ ಜನರಿಗೆ ಕಾಯಿಲೆ ಬಂದರೆ ದೇವರು ಅರಿಕೆ ಎಂದು ಮೂಢನಂಬಿಕೆಗಳ ಮೊರೆ ಹೋಗುತ್ತಾರೆ. ಯಾವ ದೇವರು ದಿಂಡ್ರು ನಿಮ್ಮ ಆರೋಗ್ಯವನ್ನು ಕಾಪಾಡಲು ಸಾಧ್ಯವಿಲ್ಲ ಆರೋಗ್ಯವೇ ನಮ್ಮ ಭಾಗ್ಯ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಕ್ಲಿನಿಕ್ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಜೀವಿಸಿ ಎಂದು ತಿಳಿಸಿದರು

ಇದೇ ವೇಳೆಯಲ್ಲಿ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರಾದ ಅರ್ಜುನ್. ಪ್ರದೀಪ್ ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ವೈದ್ಯಾಧಿಕಾರಿ ಡಾ. ಎಸ್ ಪಿ ಪೂಜಾ, ಶುಶ್ರೂಷಕಿ ಕೂನಬೇವು ಇ. ಸೌಮ್ಯ, ವೀರೇಶ್, ಪ್ರದೀಪ್, ಆಶಾ ಕಾರ್ಯಕರ್ತೆ ದ್ರಾಕ್ಷಾಯಿಣಿ, ರತ್ನಮ್ಮ, ಸೇರಿದಂತೆ 14.08.9 ವಾರ್ಡಿನ ನಿವಾಸಿಗಳು ಇದ್ದರು
[9/25, 5:56 PM] ರಾಮುದೊಡ್ಮನೆ ಚಳ್ಳಕೆರೆ👍: ಚಳ್ಳಕೆರೆ :
ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟು
ತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.ಸಿ
ತಿಳಿಸಿದರು.

ಅವರು ತಾಲೂಕಿನ ದೊಡ್ಡೆರಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಹಂಗರ್ ಪ್ರಾಜೆಕ್ ಕರ್ನಾಟಕ
ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ತಪಾಸಣಾ ಶಿಬಿರ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಬಹುವಾಗಿ ಕಾಡುವ
ಕಾಯಿಲೆ ಇದಾಗಿದೆ.

ಹಿಮೋಗ್ಲೋಬಿನ್ ಅಂಶದ ಕೊರತೆ ಬಾಲಕಿಯರಲ್ಲಿ, ಕಿಶೋರಿಯರು,
ಗರ್ಭಧಾರಿತ ಮಹಿಳೆಯರನ್ನು ಬಾಧಿಸುತ್ತದೆ

ಮಹಿಳೆಯರಲ್ಲಿ ರಕ್ತಹೀನತೆಯನ್ನು ಗುರುತಿಸಿದ ನಂತರ ಐರನ್ ಮತ್ತು ಫೋಲಕ್
ಆ್ಯಸಿಡ್‌ನಂತಹ ಮಾತ್ರೆ, ಟಾನಿಕ್ ನೀಡಿದ ನಂತರ ಕರ್ತವ್ಯ ಮುಗಿಯಿತು
ಎಂದು ಕೊಳ್ಳಬಾರದು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ರಕ್ತಹೀನತೆ
ದುಷ್ಪರಿಣಾಮಗಳ ಕುರಿತು ಸತತವಾಗಿ ಅರಿವು ಮೂಡಿಸಬೇಕಿದೆ.

ಮನೆಮನೆಗೆ ತೆರಳ
ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಸ್ಥಳೀಯವಾಗಿ ಸಿಗಬಹುದಾದ
ಹಸಿರು ತರಕಾರಿಗಳ ಬಳಕೆ, ಆಹಾರ ಪದ್ಧತಿಯಲ್ಲಿನ ಸೂಕ್ತ ಬದಲಾವಣೆ ಕುರಿತು ಮಾಹಿತಿ
ನೀಡಬೇಕು.

ವೃತ್ತಿಪರರಾಗಿ ನಾವು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಅಗತ್ಯತೆ ಹೆಚ್ಚಿದೆ.
ಆಗ ಮಾತ್ರ ರಕ್ತಹೀನತೆಯಂತಹ ತೊಂದರೆಗಳಿಂದ ಮಹಿಳೆಯರು ಪಾರಾಗಲು ಸಾಧ್ಯ
ಎಂದು ಬಿ ಹಂಗರ ಪ್ರಾಜೆಕ್ಟ್ ತಾಲೂಕು ಸಂಯೋಜಕರು ತಿಳಿಸಿದರು.

ಹಾವುಲ್ ಹಮೀದ್
ಸಮುದಾಯ ಆರೋಗ್ಯ ಅಧಿಕಾರಿ, ಅಯುಷ್ಮಾನ್ ಅರೋಗ್ಯ ಮಂದಿರ ದೊಡ್ಡಲಿ ರವರು, ಸೊಪ್ಪ
ತರಕಾರಿಯನ್ನು ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ತಿಳಿಸಿದರು

Namma Challakere Local News
error: Content is protected !!