ಗಿಡಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯ ಸೇತುವೆ ಕುಸಿತ ವಾಹನ ಸವಾರರು ಭಯದ ವಾತಾವರಣದಲ್ಲಿ ಸಂಚಾರ ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಿಎಂ ಮಂಜಣ್ಣ ರಾಮಸಾಗರ
ನಾಯಕನಹಟ್ಟಿ:: ಸೆ.21. ನಾಯಕನಹಟ್ಟಿ ಮತ್ತು ತಳಕು ಜಿಲ್ಲಾ ಹೆದ್ದಾರಿ ಮುಖ ರಸ್ತೆ ಗಿಡ್ಡಾಪುರ ಗ್ರಾಮದಲ್ಲಿ ಸೇತುವೆ ಕುಸಿದು ಬಿದ್ದಿದೆ, ಪ್ರತಿದಿನ ಅನೇಕ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ ವಾಹನ ಸಂಚಾರ ಮಾಡಬಾರ ರಸ್ತೆಯಲ್ಲಿ ಸೇತುವೆ ರಸ್ತೆ ಕುಸಿದು ಬಿದ್ದಿದ್ದು ಸುಮಾರು ದಿನಗಳು ಆದರೂ ಸಹ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಲೋಕುಪಯೋಗ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ದೂರವಾಣಿ ಕರೆ ಮಾಡಿದರು ಸಹ ಸ್ಪಂದಿಸುತ್ತಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ರಸ್ತೆ ದುರಸ್ತಿ ಪಡಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಇನ್ನೂ ಯುವ ಮುಖಂಡ ಗಿಡ್ಡಾಪುರ ಬಿ. ಬೋರಯ್ಯ ಮಾತನಾಡಿದ ಅವರು ಬಳ್ಳಾರಿ ಆಂಧ್ರಪ್ರದೇಶದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಮತ್ತು ರೈತರು ವಿದ್ಯಾರ್ಥಿಗಳು ಸಂಚಾರ ಮಾಡುವಂತಹ ಜಿಲ್ಲಾ ಹೆದ್ದಾರಿ ಮುಖ್ಯ ರಸ್ತೆಯಲ್ಲಿ ಸೇತುವೆ ಕುಸಿದು ದಿನಗಳ ಕಳೆದಿವೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಕರೆ ಮಾಡಿದರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸುಗುಮ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಿಕೊಡುವರೇ ಕಾದು ನೋಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮುಖಂಡ ಗಿಡ್ಡಾಪುರ ರುದ್ರಮುನಿ, ಗಜ್ಜುಗಾನಹಳ್ಳಿ ಯರ್ರಬಾಲಯ್ಯ, ಗಿಡ್ಡಾಪುರ ಚಂದ್ರಣ್ಣ ರಾಮಯ್ಯ,ಇದ್ದರು