ಚಳ್ಳಕೆರೆ : ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಅತಿ ಹೆಚ್ಚು ಮಕ್ಕಳು ಹಿಂದುಳಿದ ವರ್ಗದವರಾಗಿದ್ದು ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯ್ ಕುಮಾರ್ ಹೇಳಿದರು.

ಅವರು ತಾಲೂಕಿನ ಮನ್ನೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಷರ ಫೌಂಡೇಶನ್ ವತಿಯಿಂದ ನಡೆಸುವ ಗಣಿತ ಕಲಿಕಾಂದೋಲನ ಸ್ಪರ್ಧೆಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿಯ ಕಾರ್ಯಕ್ರಮದಲ್ಲಿ ಮಾತನಾಡಿದರು,

ಇನ್ನೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಇಂತಹ ಗಣಿತ ಸ್ಪರ್ಧೆಯನ್ನು ಹೆಚ್ಚು ಹೆಚ್ಚು ನಡೆಸಿದಾಗ ಮಕ್ಕಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಭಾವನೆ ಮೂಡಿರುತ್ತದೆ ಇದನ್ನು ಎಲ್ಲರ ಮನಸ್ಸಿನಿಂದ ತೆಗೆದು ಹಾಕಬೇಕು, ಗಣಿತವು ಸುಲಭವಾಗಿ ಚಟುವಟಿಕೆಯಿಂದ ದೈನಂದಿನ ವ್ಯವಹಾರದಲ್ಲಿ ತೊಡಗಿಸಿ ಕೊಂಡಾಗ ಸುಲಭವಾಗುತ್ತದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ
ಉಪಾಧ್ಯಕ್ಷರಾಗಿರುವ ಜ್ಯೋತಿ ರಾಜಣ್ಣ, ಸದಸ್ಯೆ ಪೆದ್ದಕ್ಕ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು
ಹೊಸಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ , ಸಿ.ಆರ್. ಪಿ. ಆರ್ ಸುರೇಶ್, ಮನ್ನೆಕೋಟೆ ಶಾಲೆಯ ಸಹಶಿಕ್ಷಕ ನಾಗ ಅರುಣ್, ಗಾಯಿತ್ರಿ ದೇವಿ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಸರ್ವ ಸದಸ್ಯರು, ಮನ್ನೆಕೋಟೆ ಪಂಚಾಯಿತಿ ವ್ಯಾಪ್ತಿಯ ಐದು ಶಾಲೆಗಳ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು,
ಹಾಗೂ ಗ್ರಾಮದ ಮುಖಂಡರು ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!