ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡೇರಿ ಶಾಲೆಯಲ್ಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು
ವೈದ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ಕಿಶೋರ
ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು
ಕ್ಷೇಮ ದಿನವನ್ನು ಆಚರಿಸಲಾಯಿತು.

ಆಪ್ತ ಸಮಾಲೋಚಕರಾದ ನೇಮ ನಾಯ್ಕ ಅವರು ಮಾತನಾಡಿ,
‘ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎಂಬ ವಿಷಯವನ್ನು ಎಲ್ಲಾರು ತಿಳಿಯಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೈಹಿಕ ಹಾಗೂ
ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಮಕ್ಕಳು ತಮ್ಮ ತಂದೆತಾಯಿಗಳ ಹಾಗೂ ಗುರುಹಿರಿಯರ
ಮಾರ್ಗದರ್ಶನದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು.
ದುಶ್ಚಟಗಳಿಗೆ ಒಳಗಾಗಬಾರದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ನೇಹಾ
ಕ್ಲೀನಿಕ್ ತೆರೆಯಲಾಗಿದೆ.

ಅಲ್ಲಿ ಆರೋಗ್ಯ ಸಮಸ್ಯೆಗಳಿದ್ದರೆ, ಕ್ಲಿನಿಕ್‌ಗೆ
ಭೇಟಿ ನೀಡಿ ಆಪ್ತ ಸಮಾಲೋಚಕರ ಮೂಲಕ ಸೂಕ್ತ ಪರಿಹಾರ
ಕಂಡುಕೊಳ್ಳಬಹುದಾಗಿದೆ’ ಎಂದರು.

ಮುಖ್ಯ ಶಿಕ್ಷಕ ನಾಗರಾಜ.ಸಿ ಮಾತನಾಡಿ, ಆರೋಗ್ಯವೇ
ಮಹಾಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬ ಮನುಷ್ಯ ಉತ್ತಮ ಆರೋಗ್ಯದ
ಕಡೆಗೆ ಗಮನ ಕೊಡಬೇಕು ಎಂದರು.

About The Author

Namma Challakere Local News

You missed

error: Content is protected !!