filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.46992034, 0.17482126);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ನರಹರಿನಗರದ ಹಾಲು ಉತ್ಪಾದಕರ ಸಂಘಕ್ಕೆ ಸು.3.24 ಸಾ.ಲಾಭ…!! ಶೇ.60 ರಷ್ಟು ರೈತರಿಗೆ ಬೋನಸ್ : ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ನರಹರಿನಗರದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ‌ಬಿಸಿ.ಸಂಜೀವಮೂರ್ತಿ ಹೇಳಿಕೆ

ಚಳ್ಳಕೆರೆ : ನರಹರಿನಗರದ ಹಾಲು ಉತ್ಪಾದಕರ ಸಂಘಕ್ಕೆ ಸ್ವತಃ ಕಟ್ಟಡ ಹಾಗೂ ಮೂಲಭೂತ ಸೌಲಭ್ಯ ಹೊದಗಿಸುವುದು ನನ್ನ ಧ್ಯೇಯವಾಗಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರು ಹಾಗೂ ನರಹರಿನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದರು.

ಅವರು ನಗರದ ನರಹರಿನಗರದ ಹಾಲು ಉತ್ಪಾದಕರ ಕೇಂದ್ರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಶಿವಮೊಗ್ಗ ಹಾಲು ಒಕ್ಕೂಟದ ಆಶ್ರಿತ ಸಂಸ್ಥೆ
ಆಯೋಜಿಸಿದ್ದ 2023-2024 ರ ವಾರ್ಷಿಕ ಮಹಾ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ನಿಮ್ಮ ಸಹಕಾರದಿಂದ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿದ್ದೆನೆ, ರೈತರಿಗೆ ಹಾಗೂ ಹಾಲು ಉತ್ಪಾದಕರ ಸಂಘಗಳ ಸೇವೆಗೆ ಸದಾ ಇರುವೆ, ಕಳೆದ 9 ವರ್ಷಗಳ ಅವಧಿಯ ನಮ್ಮ ಸಂಘವು ಸುಮಾರು 3,24,000 ಲಾಭಾಂಶದಲ್ಲಿ ಸಂಘ ನಡೆಯುತ್ತಿದೆ, ಶೇಕಡ 60ರಷ್ಟು ಲಾಭಾಂಶದಲ್ಲಿ ರೈತರಿಗೆ ಈ ವರ್ಷ ಬೋನಸ್ಸಾಗಿ ನೀಡುತ್ತಿದ್ದೇವೆ.

ಇನ್ನು ಚಳ್ಳಕೆರೆ ತಾಲೂಕಿನಲ್ಲಿ ಲಾಭಾಂಶದಲ್ಲಿರುವ ಹಾಲು ಉತ್ಪಾದಕರ ಸಂಘಗಳಲ್ಲಿ ನರಹರಿನಗರ ಹಾಲು ಉತ್ಪಾದಕರ ಸಂಘವು ಒಂದು, ಈ ಸಂಘದಲ್ಲಿ 136 ಶೇರುದಾರರನ್ನು ಒಳಗೊಂಡು ಪ್ರತಿನಿತ್ಯ ಸುಮಾರು 1100 ಲೀಟರ್ ಹಾಲನ್ನು ಉತ್ಪಾದನೆಯನ್ನು ಈ ಭಾಗದ ರೈತರು ಮಾಡುತ್ತಿದ್ದಾರೆ.

ಸುಮಾರು 200 ಹಸುಗಳು ಈ ಭಾಗದಲ್ಲಿ ಇದ್ದು ಇಲ್ಲಿನ ರೈತರಿಗೆ ವರದಾನವಾಗಿವೆ, ಹಾಲು ಉತ್ಪಾದಕರ ರೈತರಿಗೆ ಅಗತ್ಯವಾಗಿ ಬೇಕಾದಂತಹ ಹಾಲು ಉತ್ಪಾದನೆ ಜೊತೆಗೆ ಫೀಡಿಂಗ್, ಹಸುಗಳ ವಿಮೆ ಮಾಡುವುದು ಈಗೆ ರೈತರಿಗೆ ಸಹಕಾರಿಯಾಗಿದೆ, ಅದರಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಹಾಲಿನ ಪ್ರತಿ ಲೀಟರ್ ಗೆ 5 ರೂಪಾಯಿ ಸಹಾಯಧನವಾಗಿ ರೈತರ ಖಾತೆಗೆ ಜಮಾ ಆಗಲಿದೆ, ಅದರಂತೆ ಹಾಲು ಒಕ್ಕೂಟ ವತಿಯಿಂದ ನೇರವಾಗಿ ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ದಿನದ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ವಾರ್ಷಿಕ ಸಭೆಯಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಬಿಸಿ. ಸಂಜೀವಮೂರ್ತಿ, ಉಪಾಧ್ಯಕ್ಷರಾದ ಓ.ತಿಪ್ಪೇಸ್ವಾಮಿ, ಕೆ ಪುನಾರೆಡ್ಡಿ, ಎನ್ .ವಿಶ್ವನಾಥ್, ಲಕ್ಷ್ಮಣ, ಕಾರ್ತಿಕ್ ಎಸ್ ಮೂರ್ತಿ, ಬಿಆರ್. ಪುಷ್ಪ, ನಾಗರತ್ನಮ್ಮ, ಪಿ ಶಿವಣ್ಣ , ಎನ್ ಮಾರುತಿ, ಪುಷ್ಪ ತುಕಾ ರಾಮರೆಡ್ಡಿ, ಜಿ .ಬಸವರಾಜ್, ಎಂ ಸುರೇಶ್, ನಯಾಜ್ ಬೇಗ್ ಮಾಜಿ‌ ನಿರ್ದೇಶಕರಾದ ನಾಗೇಶ್, , ಹಾಲು ಪರೀಕ್ಷಕರಾದ ಕುಮಾರಸ್ವಾಮಿ ಪಶು ವೈದ್ಯಾಧಿಕಾರಿಗಳಾದ ಡಾ. ಸತ್ಯನಾರಾಯಣ್ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!