ಚಳ್ಳಕೆರೆ :
ಬೀದರ್ ನಿಂದ ಚಾಮರಾಜನಗರ
ವರೆಗೆ ಮಾನವ ಸರಪಳಿ ನಿರ್ಮಿಸಿ ಸ್ವಾತಂತ್ರ್ಯ,
ಸಮಾನತೆ, ಭಾತೃತ್ವದ, ಒಗ್ಗಟ್ಟಿನ ಮಂತ್ರ ಜಪಿಸುವ
ಮೂಲಕ ಪ್ರಜಾಪ್ರಭುತ್ವ ದಿನಾಚರಣೆಗೆ ಇಂದು ಚಳ್ಳಕೆರೆ ತಾಲೂಕಿನ ನೆಹರು ವೃತ್ತದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಧಿಕೃತವಾಗಿ ಚಾಲನೆ
ನೀಡಿದರು.

ಇಡೀ ಜಗತ್ತಿಗೆ ಭಾರತದ ಸಂವಿಧಾನ ಶ್ರೇಷ್ಠವಾಗಿದೆ.
ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಗೆ
ಪರಿಚಯಿಸುವುದು ಕಾರ್ಯಕ್ರಮದ ಆಶಯವಾಗಿದೆ
ಎಂದು ಹೇಳಿದರು.

ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ ಬಿರುಕು,
ದ್ವೇಷ ಅಳಿಸುವ ಕೆಲಸ ಮಾಡಲಾಗುತ್ತಿದೆ. ಬಡವರ ಮೇಲೆ
ಹೆಚ್ಚಿನ ಶೋಷಣೆಗಳಾಗುತ್ತಿದ್ದು, ಅದನ್ನು ತಪ್ಪಿಸಲು
ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ
ಅನುಷ್ಠಾನ ವಾಗಬೇಕು.

ಬ್ರಿಟನ್ ಗಿಂತ ಬಸವ
ಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು
ನಿರ್ಮಿಸಲಾಗಿತ್ತು ಎಂದರು.

ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯದಲ್ಲಿ
10,000 ಸಸಿಗಳನ್ನು ನೆಡಲಾಗುತ್ತಿದೆ, ಅದರಂತೆ ತಾಲೂಕಿನಲ್ಲಿ ಕೂಡ ಸಸಿಗಳನ್ನು ನೆಟ್ಟಿದ್ದೆವೆ ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಆನಂದ್,
ತಹಶಿಲ್ದಾರ್ ರೇಹಾನ್ ಪಾಷ, ತಾಪಂ ಇಓ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಡಿವೈಎಸ್ ಪಿ ಬಿಟಿ.ರಾಜಣ್ಣ, ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್, ಪೌರಾಯುಕ್ತ ಜಗರೆಡ್ಡಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತಾ , ಸದಸ್ಯ ಕೆ.ವೀರಭದ್ರಪ್ಪ, ರಮೇಶ್‌, ಹಳೆ ನಗರದ ವೀರಭದ್ರಪ್ಪ, ನೇತಾಜಿ ಪ್ರಸನ್ನ, ಬಿ.ಪರೀದ್ ಖಾನ್, ರೈತ ಮುಖಂಡ ಕೆ.ಪಿ.ಭೂತಯ್ಯ, ಶಾಲ ಮಕ್ಕಳು, ಸಾರ್ವಜನಿಕರು ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!