ಚಳ್ಳಕೆರೆ :
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ
ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿ
ಭಾರತದ ಮೀಸಲಾತಿ ವಿರೋಧಿಸಿ ನೀಡಿರುವ ಹೇಳಿಕೆ ಖಂಡಿಸಿ,
ಬಿಜೆಪಿ ಚಿತ್ರದುರ್ಗದ ಒನಕೆ ಒಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ,
ಕಾಂಗ್ರೆಸ್ ಹಾಗು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು
ಹಾಕಿದರು.
ದೇಶದ ಹೊರಗೆ ಒಳಗೆ ಭಾರತದ ಘನತೆಗೆ ಕುಂದು
ತರುವಂತೆ ನಡರದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಬಿಜೆಪಿ
ಅಧಿಕಾರದಲ್ಲಿರುವವರೆಗೂ ಮೀಸಲಾತಿ ಮುಂದುವರೆಯುವುದು,
ಈ ಬಗ್ಗೆ ಯಾವುದೇ ಭಯ ಬೇಡ. ಕಾಂಗ್ರೆಸ್ ಕೇವಲ ಅಪಪ್ರಚಾರ
ನಡೆಸುತ್ತಿದೆ ಎಂದರು.