ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ 2023 ರ ವಿಧಾನಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ಅನಿಲ್ ಕುಮಾರ್ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು
ನಂತರ ಮಾತನಾಡಿದ ಅವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ಇಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೆನೆ.
ನಂತರ ಮನಮೈನಹಟ್ಟಿ ಸೇವಾಲಾಲ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭೀಮಗೊಂಡನಹಳ್ಳಿ ಜಂಬಣ್ಣ, ಡಿ ಬಿ.ಕರಿಬಸಪ್ಪ ಚೌಳ್ಳುಕೆರೆ, ಗುಂತು ಕೋಲಮ್ಮನಹಳ್ಳಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ತಿಪ್ಪಯ್ಯ, ಚನ್ನಬಸಯ್ಯನಹಟ್ಟಿ ಬೋಸಯ್ಯ ಗುಂತಕೋಲಮ್ಮನಹಳ್ಳಿ, ಸಿದ್ದಲಿಂಗಯ್ಯ, ಜಾಗನೂರಹಟ್ಟಿ ಧನಂಜಯ, ಗೌಡಿಗೆರೆ ಸಣ್ಣ ರಂಗಣ್ಣ, ಚೌಳ್ಳುಕೆರೆ ಸಣ್ಣಪಾಲಯ್ಯ, ಗುಂತು ಕೋಲಮ್ಮನಹಳ್ಳಿ ಚನ್ನಪ್ಪ, ಕಾವಲು ಬಸವೇಶ್ವರನಗರ ಬೋರಣ್ಣ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು