ಚಳ್ಳಕೆರೆ :
ಗಣಪತಿ ವಿಸರ್ಜನೆಯಲ್ಲಿ ಕುಣಿದು ಕುಪ್ಪಳಿಸಿದ
ಯುವಕರು
ಚಿತ್ರದುರ್ಗದಲ್ಲಿ ಗಣಪತಿ ವಿಸರ್ಜನೆ ಕಾರ್ಯಕ್ರಮಗಳು ಅದ್ದೂರಿ
ಮೆರವಣಿಗೆಯೊಂದಿಗೆ ನಡೆಯುತ್ತಿವೆ.
ನಗರದ ಜೋಗಿಮಟ್ಟಿ
ರಸ್ತೆಯ ಮೂರನೇ ಕ್ರಾಸ್ ನಲ್ಲಿರುವ ಫ್ರೆಂಡ್ಸ್ ಗಣಪತಿಯ
ವಿಸರ್ಜನ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಗೊಂಬೆಗಳು
ಕಾಣಿಸಿಕೊಂಡರೆ, ವಾದ್ಯಗಳ ಶಬ್ದಕ್ಕೆ ಹಾಗೂ ಹಾಡಿಗೆ ತಕ್ಕಂತೆ
ಯುವಕರು ಕುಣಿದು ಕುಪ್ಪಳಿದರು. ಮೆರವಣಿಗೆ ನಗರದ
ಜೋಗಿಮಟ್ಟಿ ರಸ್ತೆ, ಸುಣಗಾರ ಬೀದಿ, ಕರುವಿನಕಟ್ಟೆ, ದೊಡ್ಡ ಪೇಟೆ,
ರಂಗಯ್ಯನಬಾಗಿಲು ಮೂಲಕ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂತು.