ಚಳ್ಳಕೆರೆ :
ಅಡುಗೆ ಸಿಲಿಂಡರ್ ಸ್ಫೋಟ ವಾಸದ ಮನೆ ಜಖಂ
ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯು ಸಂಪೂರ್ಣವಾಗಿ
ಜಖಂಗೊಂಡಿದೆ. ಕೊಂಡ್ಲಹಳ್ಳಿ ಗ್ರಾಮದ ಹೊಸ ಗೊಲ್ಲರಹಟ್ಟಿಯಲ್ಲಿ
ಕರಿಯಣ್ಣ ಎಂಬುವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ,
ಎರಡನೇ ಅಂತಸ್ತಿನ ಮನೆಯಲ್ಲಿ ಬಾಡಿಗೆ ಇದ್ದ ಮಹಿಳೆಯು,
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಎಂದಿನಂತೆ ಕಾಫಿ ಮಾಡಲೆಂದು
ಗ್ಯಾಸ್ ಸ್ಟವ್ ಹಚ್ಚಿದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡು
ಸಿಲಿಂಡರ್ ಬ್ಲಾಸ್ಟ ಆಗಿದೆ, ಸಿಲಿಂಡರ್ ಗೆ ಬೆಂಕಿ ತಗುಲಿ ಹೊತ್ತಿ
ಹುರಿಯುತ್ತಿದ್ದಂತೆ ಮಹಿಳೆಯು ಭಯದಲ್ಲಿ ಕೆಳಗೆ ಇಳಿದು ಓಡಿ
ಬಂದಿದ್ದಾಳೆ.