ನಾಯಕನಹಟ್ಟಿ ಪಟ್ಟಣದಲ್ಲಿ ವಾಹನ ಸವಾರರು ಅಂಗೈಯಲ್ಲಿ ಪ್ರಾಣ ಇಟ್ಟು ಸಂಚರಿಸುವಂತಾಗಿದೆ ಎಂದು ಸೈಯದ್ ಮಾಬು ಗಂಭೀರವಾಗಿ ಆರೋಪಿಸಿದ್ದಾರೆ.

ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ ಆದರೆ ಲೋಕೋಉಪಯೋಗ ಇಲಾಖೆ ಅಧಿಕಾರಿಗಳು ಮಾತ್ರ ಗಾಡ ನಿದ್ರೆಯಲ್ಲಿ ಇದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅವರು ಮಂಗಳವಾರ ಪಟ್ಟಣದ ವಾಲ್ಮೀಕಿ ವೃತ್ತದ ಮುಖ್ಯ ರಸ್ತೆಯ ಮೊಣಕಾಲುದ್ದ ತೊಗ್ಗು ಗುಂಡಿಗಳನ್ನು ವೀಕ್ಷಿಸಿ ಮಾತನಾಡಿದರು. ರಾಜ್ಯ ಹೆದ್ದಾರಿ 45ರ ದಾವಣಗೆರೆ ಚಳ್ಳಕೆರೆ ಮಾರ್ಗ ರಸ್ತೆಯಲ್ಲಿ ಮೊಣಕಾಲುದ್ದ ತುಗ್ಗು ಗುಂಡಿಗಳು ಬಿದ್ದಿವೆ ಪ್ರತಿದಿನ ಇಲ್ಲಿ ಸಂಚಾರ ಮಾಡುವ ವಾಹನ ಸವಾರರಾದ ಬೈಕ್ ಆಟೋಗಳಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ ಇಂಥ ಅನಾಹುತಗಳು ಪದೇ ಪದೇ ನಡೆದರೂ ಸಹ ಲೋಕೋಪಯೋಗ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿ ತೊಗ್ಗು ಗುಂಡಿಗಳ ಅವಾಂತರವೇ ಹೆಚ್ಚಾಗಿದೆ ಲೋಕುಪಯೋಗ ಅಧಿಕಾರಿಗಳು ಶೀಘ್ರದಲ್ಲಿ ತೊಕ್ಕುಗು ಗುಂಡಿಗಳನ್ನ ಮುಚ್ಚಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.

ಇನ್ನೂ ಮುಖಂಡ ಆರ್ ಪಾಲಯ್ಯ ಮಾತನಾಡಿದರು ಪಿಡಬ್ಲ್ಯೂ ಅಧಿಕಾರಿಗಳಿಗೆ ಪಟ್ಟಣದಲ್ಲಿ ಬಿದ್ದಿರುವ ತಗ್ಗು ಗುಂಡಿಗಳು ಕಣ್ಣಿಗೆ ಕಾಣುತ್ತಿಲ್ಲ ದಾವಣಗೆರೆ ರಸ್ತೆ ಪಾದಗಟ್ಟೆಯಿಂದ ಅಂಬೇಡ್ಕರ್ ವೃತ್ತದ ವರೆಗೆ ತೊಗ್ಗು ಗುಂಡಿಗಳ ಹವಾಂತರವೇ ಹೆಚ್ಚಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ತೊಗ್ಗು ಗುಂಡಿಗಳನ್ನ ಮುಚ್ಚಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಪಟ್ಟಣದ ಸಾರ್ವಜನಿಕರು ಇದ್ದರು.

Namma Challakere Local News
error: Content is protected !!