ಚಳ್ಳಕೆರೆ : ಸರ್ಕಾರದ ನಿರ್ದೇಶನದಂತೆ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಹಬ್ಬದಂತೆ ಬೃಹತ್ ಮಾನವ ಸರಪಳಿ ಮೂಲಕ ಈದೇ ಸೆ. 15 ರಂದು
ರಾಜ್ಯಾದ್ಯಂತ ಬೀದರ್ ನಿಂದ ಚಾಮರಾಜನಗರ ವರೆಗೆ ಏಕಕಾಲಕ್ಕೆ
ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶಿಷ್ಟವಾಗಿ
ಆಚರಿಸಲಾಗುತ್ತಿದ್ದು ಸಂಘ ಸಂಸ್ಥೆ ಸಾರ್ವಜನಿಕರು ಮಾನವ ಸರಪಳಿ
ನಿರ್ಮಿಸುವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವರಿ
ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ
ಅಧಿಕಾರಿಗಳಿಗೆ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ
ದಿನಾಚರಣೆ ಮಾನವ ಸರಪಳಿ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.

ಇದೇ ತಿಂಗಳ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಈ ದಿನವನ್ನು ಅರ್ಥಗರ್ಭಿತವಾಗಿ
ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಈ ಬಾರಿ ಏಕಕಾಲಕ್ಕೆ ಬೀದರ್ ನಿಂದ
ಚಾಮರಾಜನಗರ ವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಮಾನವ ಸರಪಳಿ
ನಿರ್ಮಿಸಿ, ಏಕಕಾಲಕ್ಕೆ ಸಂವಿಧಾನ ಪೀಠಿಕೆ ವಾಚನ ಮಾಡಲಾಗುವುದು.
ಈ ಬೃಹತ್ ಮಾನವ ಸರಪಳಿಗೆ ಚಿತ್ರದುರ್ಗ ಜಿಲ್ಲೆಯಲ್ಲೂ ಕೈ
ಜೋಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಮೊಳಕಾಲೂರು ತಾಲ್ಲೂಕು
ತಮ್ಮೇನಹಳ್ಳಿ (ಗಡಿಭಾಗ) ಯಿಂದ ಆರಂಭಗೊಳ್ಳುವ ಮಾನವ
ಸರಪಳಿಯು ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ (ಗಡಿಭಾಗ)
ವರೆಗೆ 110 ಕಿ.ಮೀ. ವರೆಗೂ ನಿರ್ಮಾಣಗೊಳ್ಳಲಿದೆ.

ಜಿಲ್ಲೆಯ
ಮೊಳಕಾಲ್ಕೂರು, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಈ
ಮಾನವ ಸರಪಳಿ ನಿರ್ಮಾಣ ಆಗಬೇಕು. ಇದೊಂದು ವಿಶೇಷ ಮತ್ತು
ದೇಶಾಭಿಮಾನದ ಕಾರ್ಯಕ್ರಮವಾಗಿದ್ದು ಎಲ್ಲ ಸಾರ್ವಜನಿಕರು, ಸಂಘ
ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು
ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.

ಮಾನವ
ಸರಪಳಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುವುದರಿಂದ,
ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ವಾಹನ
ಸಂಚಾರ ದಟ್ಟಣೆಯನ್ನು ಪೊಲೀಸ್ ಇಲಾಖೆ ಅಧಿಕಾರಿಗಳು
ಸಮರ್ಪಕವಾಗಿ ನಿರ್ವಹಿಸಬೇಕು. ಕಾರ್ಯಕ್ರಮವನ್ನು ಅತ್ಯಂತ
ಅಚ್ಚುಕಟ್ಟಾಗಿ ರೂಪಿಸಲು ಅಧಿಕಾರಿಗಳು ಈಗಿನಿಂದಲೇ ಅಗತ್ಯ
ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ ಎರಡು ದಿನರಜೆ ಇದೆ ಎಂದು
ಅಧಿಕಾರಿಗಳು ಗೈರು ಹಾಜರಿಯಾಗುವಂತಿಲ್ಲ ಇಲಾಖೆವಾರು
ನಿಗದಿಪಡಿಸಿದ ಜನರನ್ನು ಕರೆತರುವ ಜವಾಬ್ದಾರಿ ಹಾಗೂ ನಿಗದಿತ
ಸಮಯಕ್ಕೆ ಸರಿಯಾಗಿ ಹಾಜರಿಯಾಗಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸುವಂತೆ ತಿಳಿಸಿದರು

ಜಿಲ್ಲಾಧಿಕಾರಿ ವೆಂಕಟೇಶ್ ಟಿ
ಮಾತನಾಡಿ, ಸರ್ಕಾರದ ಸೂಚನೆಯಂತೆ ಈ ಬಾರಿ ಸೆ.15 ರಂದು
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬೃಹತ್ ಮಾನವ
ಸರಪಳಿ ನಿರ್ಮಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 110 ಕಿ.ಮೀ. ಮಾನವ ಸರಪಳಿಯನ್ನು
ನಿರ್ಮಿಸಲಾಗುವುದು, ಪ್ರತಿ ಕಿ.ಮೀ. ಗೆ ಸುಮಾರು 850 ಜನರಂತೆ,
ಒಟ್ಟು 110 ಕಿ.ಮೀ. ಗೆ ಅಂದಾಜು 95 ಸಾವಿರ ಜನರ ಅಗತ್ಯವಿದೆ.
ಇದಕ್ಕಾಗಿ ಈಗಾಗಲೆ ಅಗತ್ಯ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು,
ಸ್ವ-ಸಹಾಯ ಸಂಘ ಪ್ರತಿನಿಧಿಗಳು, ಆಶಾ, ಅಂಗನವಾಡಿ
ಕಾರ್ಯಕರ್ತೆಯರು,ಬೋಧಕ, ಬೋಧಕೇತರ ಸಿಬ್ಬಂದಿಗಳು, ಮಾರ್ಗದ
ಅಕ್ಕ-ಪಕ್ಕದ ಗ್ರಾಮಪಂಚಾಯಿತಿ ನಗರಸಭೆ ವ್ಯಾಪ್ತಿಯಲ್ಲಿ ನಿಗದಿತ ಗುರಿ
ಜನರು ಭಾಗವಹಿಸಲಿದ್ದಾರೆ, ಅದರಂತೆ ಕಾರ್ಯಕ್ರಮ ರೂಪಿಸಲಾಗಿದೆ.

ಇದಕ್ಕಾಗಿ ಖಾಸಗಿ ಶಾಲೆಗಳ ಸುಮಾರು 200 ಕ್ಕೂ ಹೆಚ್ಚು ವಾಹನ ಗಳನ್ನು
ಸಾರಿಗೆ ಸಂಪರ್ಕಕ್ಕಾಗಿ ಬಳಸಲು ಯೋಜಿಸಲಾಗಿದೆ. ಪ್ರತಿ 05 ಕಿ.ಮೀ. ಗೆ
ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ
ನಿಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ
ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಸಾಕಷ್ಟು ಶುದ್ಧ ಕುಡಿಯುವ ನೀರು,
ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ರಕ್ಷಣೆ, ಆಂಬುಲೆನ್ಸ್ ವ್ಯವಸ್ಥೆ
ಮಾಡಲಾಗುವುದು ಎಂದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವು
ದೇಶಾಭಿಮಾನ ಬಿಂಬಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಎಲ್ಲ
ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು
ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬಿ.ಉಪಾಧ್ಯಕ್ಷೆ ಓ.ಸುಜಾತ ಜಿಪಂ
ಕೆಡಿಪಿ ಸದಸ್ಯ ಓ
ರಂಗಸ್ವಾಮಿ, ಜಿಪಂ ಸಿಇಒ ಸೋಮಶೇಖರ್, ಉಪವಿಭಾಗಾಧಿಕಾರಿ
ಕಾರ್ತೀಕ್, ಕೃಷಿ ಜಂಟಿ ನಿರ್ದೇಶಕ ಹಾಗೂ ತಾಪಂ
ಆಡಳಿತಾಧಿಕಾರಿ ಮಂಜುನಾಥ, ತಹಶಿಲ್ದಾರ ರೇಹಾನ್ ಪಾಷ.
ತಾಪಂ ಇಒಶಶಿಧರ್. ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ
ಇಲಾಖೆಯ ಅಧಿಕಾಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!