ಚಳ್ಳಕೆರೆ :
ವಿವಿಧ ಕಾಮಗಾರಿಗಳನ್ನು ವೀಕ್ಷಸಿದ ಜಿಲ್ಲಾಧಿಕಾರಿ
ಮೊಳಕಾಲ್ಕೂರಿನ ವಿವಿಧೆಡೆಗಳಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ
ಕಾಮಗಾರಿಗಳ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್
ಮಾಡಿದರು.
ಮೊಳಕಾಲ್ಕೂರಿಗೆ ಭೇಟಿ ನೀಡಿದ ಅವರು, ಮೊದಲಿಗೆ
ರಸ್ತೆ ಅಭಿವೃದ್ಧಿ, ವಿದ್ಯಾರ್ಥಿ ನಿಲಯದ ಕಾಮಗಾರಿ ವೀಕ್‌ಸಿ
ಗುಣಮಟ್ಟದ ಕೆಲಸ ಮಾಡುವಂತೆ ಲೋಕೋಪಯೋಗಿ ಇಲಾಖೆ
ಇಂಜಿಯರ್ ಗೆ ಸೂಚಿಸಿದರು.
ತಹಶೀಲ್ದಾರ್ ಕಚೇರಿಗೆ ಬಂದು
ಸಿಬ್ಬಂದಿಗಳು ಹಾಗು ಇತರರ ಸಮಸ್ಯೆ ಆಲಿಸಿ, ಸಾರ್ವಜನಿಕರು
ಬಂದಾಗ ಅವರಿಗೆ ಸಮಾಧಾನದ ಉತ್ತರಿಸುವ ಮೂಲಕ
ಸ್ಪಂದಿಸುವಂತೆ ಸೂಚಿಸಿದರು.