ಚಳ್ಳಕೆರೆ :
ಪಕ್ಷಕ್ಕಾಗಿ 15 ಕೋಟಿ ಆಸ್ತಿ ಮಾಡಿದ್ದೇನೆ: ಸಚಿವೆ
ಹೆಬ್ಬಾಳ
ಬೆಳಗಾವಿ ಕಾಂಗ್ರೆಸ್ ಸಮಿತಿಗೆ ಸುಮಾರು 15 ಕೋಟಿ ರೂಪಾಯಿ
ಆಸ್ತಿಯನ್ನು ನಾನು ಮಾಡಿದ್ದೇನೆ ಎಂದು ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳರ್ ಹೇಳಿದರು.
ಅವರು
ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ
ಮಾತಾಡಿದರು.
ಒಂದು ಬಾರಿ ಅಲ್ಲ ಎರಡು ಬಾರಿ ಟಿಕೆಟ್ ಕೊಟ್ಟರು ಸೋತು
ಎದೆಗುಂದದೆ, ಇಡೀ ರಾಜ್ಯದ ಸಂಚಾರ ಮಾಡಿ ಪಕ್ಷ ಸಂಘಟನೆ
ಮಾಡಿ, ಗೆದ್ದು ಬಂದು ಈಗ ಮಂತ್ರಿಯಾಗಿದ್ದೇನೆ.
ಎರಡು ದಿನದ
ಪರಿಶ್ರಮವಲ್ಲ. 24 ವರ್ಷಗಳ ಶ್ರಮವಾಗಿದೆ ಎಂದು ಹೇಳಿದರು.