ಕೆ.ನಾಗಪ್ಪ ನಿಧನ.
ನಾಯಕನಹಟ್ಟಿ : ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೆ.ನಾಗಪ್ಪ (70) ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ ನಾಯಕನಹಟ್ಟಿ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ.
ಕೆ.ನಾಗಪ್ಪ ಅವರು ನಾಯಕನಹಟ್ಟಿ ಗ್ರಾಮಪಂಚಾಯಿತಿ ಸದಸ್ಯರಾಗಿ, ಗುರುತಿಪ್ಪೇರುದ್ರಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಅವರು ಮೃತಪಟ್ಟ ಸುದ್ದಿ ತಿಳಿದು ಗಣ್ಯರಾದ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು), ತಾ.ಪಂ.ಮಾಜಿ ಸದಸ್ಯರಾದ ಸಮರ್ಥರಾಯ್, ನಾಯಕನಹಟ್ಟಿ ಪ.ಪಂ.ಅಧ್ಯಕ್ಷೆ ಮಂಜುಳಾಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಎಸ್.ಉಮಾಪತಿ, ಸದಸ್ಯರಾದ ಜೆ.ಆರ್.ರವಿಕುಮಾರ್, ಸೈಯದ್‍ಅನ್ವರ್, ಪಿ.ಓಬಯ್ಯ(ದಾಸ್), ಮಾಜಿ ಸದಸ್ಯ ಎನ್‍ಐಎಂಡಿ ಮನ್ಸೂರ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜೆ.ಪಿ.ರವಿಶಂಕರ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಗಂಗಾಧರಪ್ಪ ಮುಖಂಡರಾದ ಶಂಕರ್‍ಯಾದವ್, ಕೆ.ಎಂ.ಮಹಮ್ಮದ್‍ಯೂಸೂಫ್, ಸಂತಾಪ ಸೂಚಿಸಿದರು.